ಬೆಂಗಳೂರು:ಚೆಕ್ ಬೌನ್ಸ್ ಪ್ರಕರಣ ಆರೋಪದಲ್ಲಿ ವಾರಂಟ್ ರಿಕಾಲ್ ಮಾಡಿಸಿಕೊಳ್ಳಲು ಕೋರ್ಟ್ಗೆ ಹಾಜರಾಗಿದ್ದ ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನು ಇಲ್ಲಿನ ಜನಪ್ರತಿನಿಧಿಗಳ ಕೋರ್ಟ್ ಪೊಲೀಸರ ವಶಕ್ಕೆ ಒಪ್ಪಿಸಿದರು.
ಬಳಿಕ, ₹ 100 ಶುಲ್ಕ ಪಾವತಿಸಿಕೊಂಡು ವಾರಂಟ್ ರೀಕಾಲ್ ಮಾಡಿದ ನ್ಯಾಯಾಧೀಶರು, ಪೊಲೀಸರ ವಶಕ್ಕೆ ನೀಡಿದ್ದ ಗೂಳಿಹಟ್ಟಿ ಶೇಖರ್ ಅವರನ್ನು ಬಿಡುಗಡೆ ಮಾಡಿದರು.ಇನ್ನೊಮ್ಮೆ ಹೀಗೆ ವಿಚಾರಣೆಗೆ ತಪ್ಪಿಸಿಕೊಂಡರೆ ಒಳಗೆ ಕಳಿಸಿಬಿಡ್ತೇನೆ ಎಂದು ಎಚ್ಚರಿಕೆ ನೀಡಿದರು.
₹1.25 ಕೋಟಿ ಚೆಕ್ ಬೌನ್ಸ್ ಆರೋಪ ಎದುರಿಸುತ್ತಿರುವ ಗೂಳಿಹಟ್ಟಿ ಶೇಖರ್ ಶುಕ್ರವಾರ, 'ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ'ನಡೆಸುವ ನ್ಯಾಯಲಯಕ್ಕೆ ಹಾಜರಾಗಿದ್ದರು.
ಈ ಹಿಂದಿನ ವಿಚಾರಣೆ ವೇಳೆಯಲ್ಲಿ ಕೋರ್ಟ್‌ಗೆ ಗೈರಾಗಿದ್ದ ಕಾರಣ ಶೇಖರ್ ವಿರುದ್ಧ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.
ಬೆಳಿಗ್ಗೆ ವಾರಂಟ್ ರಿಕಾಲ್ ಮಾಡಿಸಲು ಹಾಜರಾಗಿದ್ದ ಶೇಖರ್ ಅವರನ್ನು ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಅವರು ಆರೋಪಿ ಶೇಖರ್ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದರು.
ಮಹಾಲಕ್ಷ್ಮಿ ಲೇಔಟ್ ಜನತಾ ಕೋ ಅಪರೇಟಿವ್ ಸೊಸೈಟಿಯು, ಹೊಸದುರ್ಗ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ವಿರುದ್ಧ ನೀಡಿರುವ ದೂರು ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.