ADVERTISEMENT

ಡಾ.ಎಸ್‌.ಎಂ.ವೃಷಭೇಂದ್ರ ಸ್ವಾಮಿ ನಿಧನ

​ಪ್ರಜಾವಾಣಿ ವಾರ್ತೆ
Published 28 ಜನವರಿ 2015, 19:30 IST
Last Updated 28 ಜನವರಿ 2015, 19:30 IST
ಡಾ.ಎಸ್‌.ಎಂ.ವೃಷಭೇಂದ್ರ ಸ್ವಾಮಿ ನಿಧನ
ಡಾ.ಎಸ್‌.ಎಂ.ವೃಷಭೇಂದ್ರ ಸ್ವಾಮಿ ನಿಧನ   

 ಧಾರವಾಡ: ಹಿರಿಯ ವಿದ್ವಾಂಸ ಹಾಗೂ ಇಲ್ಲಿಯ ಕರ್ನಾಟಕ ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಪೀಠದ ನಿವೃತ್ತ ನಿರ್ದೇಶಕ ಡಾ. ಎಸ್‌.ಎಂ.ವೃಷಭೇಂದ್ರ ಸ್ವಾಮಿ (88) ಬುಧವಾರ ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಸತ್ತೂರಿನಲ್ಲಿರುವ ಖಾಸಗಿ ಆಸ್ಪತ್ರೆ­ಯಲ್ಲಿ ಅವರು ಹೃದಯಾ­ಘಾತ­ದಿಂದ ಕೊನೆಯುಸಿರೆಳೆದರು. ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ರುದ್ರಭೂಮಿಯಲ್ಲಿ ಗುರುವಾರ ಸಂಜೆ 4ಕ್ಕೆ ಅಂತ್ಯಕ್ರಿಯೆ ನಡೆಯಲಿದೆ.

ಕುವೆಂಪು ಅವರ ಶಿಷ್ಯರಾಗಿದ್ದ ವೃಷ­ಭೇಂದ್ರಸ್ವಾಮಿ, ತಾವು ತರಗತಿ­ಯಲ್ಲಿ ಕೇಳಿದ ಪಾಠಗಳನ್ನು ಆಧರಿಸಿ ಭಾರತ ಕಾವ್ಯಮೀಮಾಂಸೆಗೆ ಕುವೆಂಪು ತುಳಿದ ಸ್ವತಂತ್ರ ಹಾದಿ ಕುರಿತ ಒಳನೋಟಗಳನ್ನು ಒಳಗೊಂಡ ಕೃತಿ ‘ತರಗತಿಯಲ್ಲಿ ಕುವೆಂಪು’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.