ADVERTISEMENT

ನಾಗೇಶ ಹೆಗಡೆಗೆ ಬಿ.ಎಚ್‌. ಶ್ರೀಧರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2017, 19:42 IST
Last Updated 1 ಏಪ್ರಿಲ್ 2017, 19:42 IST
ನಾಗೇಶ ಹೆಗಡೆಗೆ ಬಿ.ಎಚ್‌. ಶ್ರೀಧರ ಪ್ರಶಸ್ತಿ
ನಾಗೇಶ ಹೆಗಡೆಗೆ ಬಿ.ಎಚ್‌. ಶ್ರೀಧರ ಪ್ರಶಸ್ತಿ   

ಶಿರಸಿ: ಹಿರಿಯ ಸಾಹಿತಿ ಬಿ.ಎಚ್. ಶ್ರೀಧರ ಸ್ಮರಣೆ ಯಲ್ಲಿ ನೀಡಲಾಗುವ ‘ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ’ಗೆ ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಅವರು ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ₹ 5,000 ನಗದು,  ಫಲಕ, ಸ್ಮರಣಿಕೆಯನ್ನು ಒಳಗೊಂಡಿದೆ. ಇದೇ 24ರಂದು ನಡೆಯುವ ಬಿ.ಎಚ್. ಶ್ರೀಧರ ಜನ್ಮದಿನದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಚೆನ್ನೈ–ಮಡಗಾಂವ ನಡುವೆ ವಿಶೇಷ ರೈಲು
ಕಾರವಾರ: ಚೆನ್ನೈ ಸೆಂಟ್ರಲ್‌ ಹಾಗೂ ಮಡಗಾಂವ ನಡುವೆ ಏಪ್ರಿಲ್‌ 4ರಿಂದ ಜೂನ್‌ 6ರವರೆಗೆ ಬೇಸಿಗೆ ಕಾಲದ ವಿಶೇಷ ರೈಲು ಓಡಿಸಲು ಕೊಂಕಣ ರೈಲ್ವೆ ಮುಂದಾಗಿದೆ.

ADVERTISEMENT

ಪ್ರತಿ ಮಂಗಳವಾರ ಚೆನ್ನೈ ಸೆಂಟ್ರಲ್‌ನಿಂದ ಸಂಜೆ 5.30ಕ್ಕೆ ಹೊರಡುವ ರೈಲು ಮರುದಿನ            ಸಂಜೆ         4 ಗಂಟೆಗೆ ಮಡಗಾಂವ ತಲುಪಲಿದೆ.
ಮರುಪ್ರಯಾಣದಲ್ಲಿ ಬುಧವಾರ (ಇದೇ 5 ರಿಂದ ಜೂನ್ 7 ರವರೆಗೆ) ಸಂಜೆ 5.15ಕ್ಕೆ ಮಡಗಾಂವದಿಂದ ಹೊರಟು ಗುರುವಾರ ಮಧ್ಯಾಹ್ನ 3.35ಕ್ಕೆ ಚೆನ್ನೈ ಸೆಂಟ್ರಲ್‌ ತಲುಪಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

‘ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂಗೆ’
ಬಳ್ಳಾರಿ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಒಡೆತನದ ಕಂಪೆನಿಯ ₹ 900 ಕೋಟಿಗೂ ಮಿಕ್ಕಿದ ಸ್ಥಿರ ಮತ್ತು ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಜಾರಿ ನಿರ್ದೇಶನಾಲ ಯವು (ಇ.ಡಿ) ಸಿಬಿಐ ನ್ಯಾಯಾಲ ಯದಲ್ಲಿ ದಾಖಲಿಸಿದ್ದ ದೋಷಾರೋಪ ಪಟ್ಟಿಯನ್ನು ಹೈಕೋರ್ಟ್ ರದ್ದು ಮಾಡಿದೆ. ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್‌.ಹಿರೇಮಠ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.