ADVERTISEMENT

ನಾಡ ಧ್ವಜ ವಿವಾದ: ನೀವು ತಿಳಿದುಕೊಂಡಿರಬೇಕಾದ 12 ಸಂಗತಿಗಳು

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 15:25 IST
Last Updated 19 ಜುಲೈ 2017, 15:25 IST
ನಾಡ ಧ್ವಜ ವಿವಾದ: ನೀವು ತಿಳಿದುಕೊಂಡಿರಬೇಕಾದ 12 ಸಂಗತಿಗಳು
ನಾಡ ಧ್ವಜ ವಿವಾದ: ನೀವು ತಿಳಿದುಕೊಂಡಿರಬೇಕಾದ 12 ಸಂಗತಿಗಳು   

ಬೆಂಗಳೂರು: ಕರ್ನಾಟಕಕ್ಕೆ ಪ್ರತ್ಯೇಕ ನಾಡ ಧ್ವಜ ಬೇಕು, ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ 9 ಮಂದಿಯ ಸಮಿತಿ ರಚಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಒಂದು ರಾಷ್ಟ್ರ ಒಂದು ಧ್ವಜ ಎಂಬ ಸೂತ್ರದ ನಡುವೆ ರಾಜ್ಯವೊಂದಕ್ಕೆ ಪ್ರತ್ಯೇಕ ಬಾವುಟ ಯಾಕೆ ಎಂಬ ಪ್ರಶ್ನೆ ಇಲ್ಲಿ ಎದ್ದಿದೆ.  ಇದರ ಜತೆಗೆ ರಾಜ್ಯ ಸರ್ಕಾರ ಈಗಿರುವ ಕರ್ನಾಟಕ ಸರ್ಕಾರ ಹಳದಿ, ಕೆಂಪು ಮಿಶ್ರಿತ ನಾಡ ಧ್ವಜದ ಸ್ವರೂಪವನ್ನು ಬದಲಿಸಲು ಹೋಗುತ್ತಿದೆ. ಹಾಗಾಗಿ ಧ್ವಜವನ್ನು ಬದಲಿಸುವುದು ಯಾಕೆ ಎಂಬ ಪ್ರಶ್ನೆಯನ್ನೂ ಜನರು ಎತ್ತಿದ್ದಾರೆ. ಏತನ್ಮಧ್ಯೆ ಕರ್ನಾಟಕಕ್ಕೆ ನಾಡಗೀತೆ ಇರುವಾಗ ನಾಡಧ್ವಜ ವಿನ್ಯಾಸ ಮಾಡಿಕೊಂಡರೆ ತಪ್ಪೇನು ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.

1. ಕನ್ನಡ ಧ್ವಜ ಹುಟ್ಟಿದ್ದು ಹೇಗೆ?
ಅರಿಶಿಣ ಮತ್ತು ಕೆಂಪು ಬಣ್ಣದ  ನಾಡಧ್ವಜವನ್ನು ೧೯೬೫ರಲ್ಲಿ ಶ್ರೀ ಎಂ.ರಾಮಮೂರ್ತಿಯವರು ಪ್ರಾರಂಭಿಸಿದ ರಾಜಕೀಯ ಪಕ್ಷ ಕನ್ನಡ ಪಕ್ಷಕ್ಕೆ ಬಾವುಟವಾಗಿ ಹುಟ್ಟು ಹಾಕಲಾಯಿತು. ಈ ಧ್ವಜವನ್ನು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ಸಮಾವೇಶಗಳಲ್ಲಿ, ಕನ್ನಡ ಸಂಸ್ಕೃತಿ ಸಮ್ಮೇಳನಗಳಲ್ಲಿ, ಮತ್ತು ಎಲ್ಲೆಂದರಲ್ಲಿ ಹಾರಿಸಿದರೂ ಕೂಡ, ಅದಕ್ಕೊಂದು ಅಧಿಕೃತ ಮಾನ್ಯತೆ ಸಿಗಲೇ ಇಲ್ಲ. ಇರುತ್ತಿತ್ತು. ರಾಷ್ಟ್ರಧ್ವಜಕ್ಕೆ ಇರುವಷ್ಟು ಮಾನ್ಯತೆ ಕರ್ನಾಟಕದಲ್ಲಿ ಕನ್ನಡ ಧ್ವಜಕ್ಕೂ ಇದೆ. ಗೋಕಾಕ್ ಚಳವಳಿಯಲ್ಲಿ ಕನ್ನಡಿಗರ ಐಕ್ಯತೆಯ ಸಂಕೇತವಾಗಿ ಈ ಧ್ವಜವನ್ನು ಬಳಸಲಾಗಿತ್ತು. 1998ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಧ್ವಜವನ್ನು ರಾಜ್ಯ ಧ್ವಜವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿತ್ತು. ಆದರೆ, ಕಾನೂನು ಅಡಚಣೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಡಿವಿ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ರಾಜ್ಯೋತ್ಸವದಂದು ಎಲ್ಲ ಸರಕಾರಿ ಕಟ್ಟಡಗಳ ಮೇಲೆ ಕಡ್ಡಾಯವಾಗಿ ಕನ್ನಡ ಧ್ವಜವನ್ನು ಹಾರಿಸಬೇಕೆಂದು ಸುತ್ತೋಲೆ ಹೊರಡಿಸಿತ್ತು.
ಆದರೆ, ಕರ್ನಾಟಕ ಹೈಕೋರ್ಟ್ ಇದನ್ನು ಪ್ರಶ್ನಿಸಿದ್ದರಿಂದ ಆದೇಶವನ್ನು ಹಿಂಪಡೆಯಬೇಕಾಗಿತ್ತು. ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿದರೆ ಯಾವ ರಾಜ್ಯದಲ್ಲೂ ಅಧಿಕೃತವಾಗಿ ರಾಜ್ಯಧ್ವಜವಿಲ್ಲ.

2. ಈಗಿರುವ ನಾಡಧ್ವಜಕ್ಕೆ ಮಾನ್ಯತೆ ಇಲ್ಲ
ಸದ್ಯ ಕರ್ನಾಟಕ ಸರ್ಕಾರ ಹಳದಿ, ಕೆಂಪು ಮಿಶ್ರಿತ ಧ್ವಜವನ್ನು ನಾಡಧ್ವಜವನ್ನಾಗಿ ಸ್ವೀಕರಿಸಿದೆ. ಆದರೆ ಇದಕ್ಕೆ ಅಧಿಕೃತವಾದ ಮಾನ್ಯತೆ ಇಲ್ಲ. ಈ ನಡುವೆ ಕರ್ನಾಟಕದ ನಾಡಧ್ವಜವನ್ನು ಅಧಿಕೃತ ನಾಡಧ್ವಜವಾಗಿ ಮಾನ್ಯ ಮಾಡಲು ರಾಜ್ಯ ಸರ್ಕಾರ 9 ಮಂದಿಯ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯು ಅಧ್ಯಯನ ನಡೆಸಿ ಈಗಿರುವ ಧ್ವಜವನ್ನೇ ಅಂಗೀಕರಿಸಬೇಕೆ ಇಲ್ಲವೇ ಹೊಸತೊಂದು ಧ್ವಜವನ್ನು ವಿನ್ಯಾಸಗೊಳಿಸಬೇಕೆ ಎಂಬುದರ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡಲಿದೆ.
ಸಾಹಿತಿ ಡಾ.ಪಾಟೀಲ ಪುಟ್ಟಪ್ಪ ಹಾಗು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಅವರು ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ವಿನ್ಯಾಸಗೊಳಿಸಿ ಅದಕ್ಕೆ ಕಾನೂನಿನ ಸ್ವರೂಪ ನೀಡುವಂತೆ ಕೋರಿಕೊಂಡಿದ್ದರು, ಈ ಕೋರಿಕೆ ಅನುಸಾರ ನಾಡ ಧ್ವಜವೊಂದನ್ನು ರೂಪಿಸಿ ಅದಕ್ಕೆ ಕಾನೂನು ಚೌಕಟ್ಟು ಕೊಡಲು ಜೂನ್ 6ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ಜೂನ್ 6ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ಸಮಿತಿಯ ಅಧ್ಯಕ್ಷರನ್ನಾಗಿ ಘೋಷಿಸಿದೆ. ರಾಜ್ಯಪಾಲರ ಪರವಾಗಿ ಜಿ.ಅನ್ನಪೂರ್ಣ ಸಹಿ ಮಾಡಿರುವ ಆದೇಶದಲ್ಲಿ ಈ ಸಮಿತಿ ರಾಜ್ಯ ಧ್ವಜವನ್ನು ವಿನ್ಯಾಸಗೊಳಿಸಿ ಅದಕ್ಕೆ ಕಾನೂನು ಮಾನ್ಯತೆ ನೀಡುವ ಸಂಬಂಧ ವರದಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ADVERTISEMENT

3. ವಿವಾದ ಸೃಷ್ಟಿಯಾಗಿದ್ದು ಹೇಗೆ?
ನಾಡಧ್ವಜ ವಿನ್ಯಾಸ ಮಾಡಲು ಕಾಂಗ್ರೆಸ್ ಸರ್ಕಾರ ಸಮಿತಿಯೊಂದನ್ನು ರೂಪಿಸಿದೆ ಎಂಬ ವಿಚಾರ ಬೆಳಕಿಗೆ ಬರುತ್ತಿದ್ದಂತೆ  ವಿವಾದ ಸೃಷ್ಟಿಯಾಗಿದೆ. ರಾಷ್ಟ್ರಮಟ್ಟದ ಸುದ್ದಿ ಮಾಧ್ಯಮಗಳು ಕರ್ನಾಟಕವೂ ಕಾಶ್ಮೀರದಂತೆ ಪ್ರತ್ಯೇಕ ಧ್ವಜಕ್ಕೆ ಬೇಡಿಕೆಯಿರಿಸಿದೆ ಎಂಬ ತಲೆಬರಹ ನೀಡಿ ಒನ್ ನೇಷನ್ ಒನ್ ಫ್ಲ್ಯಾಗ್ (ಒಂದು ರಾಷ್ಟ್ರ ಒಂದು  ಧ್ವಜ) ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.