ADVERTISEMENT

ನಿಧನ ವಾರ್ತೆ : ವಸು ಮಳಲಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2015, 19:30 IST
Last Updated 3 ಫೆಬ್ರುವರಿ 2015, 19:30 IST

ಬೆಂಗಳೂರು: ಬೆಂಗಳೂರು ವಿವಿ ಇತಿಹಾಸ ವಿಭಾಗದ ಪ್ರಾಧ್ಯಾ-ಪಕಿ ಡಾ.ಎಂ.ವಿ.ವಸು (ವಸು ಮಳಲಿ)  ಅನಾರೋಗ್ಯದಿಂದ ನಗರದ ಜಯ-ದೇವ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ನಿಧನರಾದರು.

ಅವರು ಒಂದೂವರೆ ವರ್ಷದ ಹಿಂದೆ ಸ್ತನ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಗೆ ಒಳ-ಗಾಗಿ ಚೇತರಿಸಿ-ಕೊಳ್ಳು-ತ್ತಿದ್ದರು. 15 ದಿನಗಳ ಹಿಂದೆ ರಕ್ತ-ದೊತ್ತಡ ಕುಸಿತ ಹಿನ್ನೆ-ಲೆ--ಯಲ್ಲಿ ಆಸ್ಪತ್ರೆಗೆ ದಾಖ-ಲಾಗಿ-ದ್ದರು.  ಅವರಿಗೆ 48 ವರ್ಷ. ಹಿರಿಯ ಸಾಹಿತಿ ಮಳಲಿ ವಸಂತ ಕುಮಾರ್‌ ಅವರ ಪುತ್ರಿ-ಯಾದ ವಸು ಅವರಿಗೆ ಅವನಿ ಎಂಬ ಮಗಳಿದ್ದಾಳೆ.

ಅವರು ಮೈಸೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ (ಇತಿಹಾಸ) ಹಾಗೂ ಡಾಕ್ಟರೇಟ್‌ ಪಡೆದಿದ್ದರು. ಆರಂಭ-ದಲ್ಲಿ ತುಮಕೂರು ಸ್ನಾತ-ಕೋತ್ತರ ಕೇಂದ್ರದಲ್ಲಿ ಕಾರ್ಯನಿರ್ವ-ಹಿಸಿದ್ದರು. 1999ರಲ್ಲಿ ಬೆಂಗಳೂರು ವಿ.ವಿಯ ಇತಿಹಾಸ ವಿಭಾಗಕ್ಕೆ ಸೇರಿ-ದ್ದರು. ಹಂಪಿ ಕನ್ನಡ ವಿ.ವಿ ಸಿಂಡಿ-ಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಸಂಶೋಧನಾ ಗ್ರಂಥ ‘ಮೌಖಿಕ ಇತಿಹಾಸ’, ಸಂಪಾದನಾ ಗ್ರಂಥ ‘ಕನ್ನಡದೊಳ್‌ ಭಾವಿಸಿದ ಜನಪದಂ’ ಅವರ ಕೃತಿಗಳು.  ‘ಪ್ರಜಾ-ವಾಣಿ’-ಯಲ್ಲಿ ಅವರ ‘ಕಳ್ಳು ಬಳ್ಳಿ’ ಅಂಕಣ ಪ್ರಕಟವಾಗಿತ್ತು. ಪ್ರಗತಿ-ಪರ ಚಳವಳಿ-ಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿ-ದ್ದರು. ಅವರು ಉತ್ತಮ ವಾಗ್ಮಿ.

ಸಿನಿಮಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಪುಣೆ ಫಿಲಂ ಇನ್‌ಸ್ಟಿ-ಟ್ಯೂಟ್‌ನಲ್ಲಿ ಸಿನಿಮಾ ನಿರ್ಮಾಣದ ಹಾಗೂ ಹಾಲಿವುಡ್‌ನಲ್ಲಿ ನಿರ್ದೇ-ಶನದ ತರಬೇತಿ ಪಡೆದಿದ್ದರು. ‘ನೆತ್ತರು ಮತ್ತು ಗುಲಾಬಿ’ ಎಂಬ ಕಿರುಚಿತ್ರ ಸೇರಿ-ದಂತೆ ಮೂರು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಅವರ ನಿರ್ದೇಶನದ ನಕ್ಸಲ್‌ ಹೋರಾಟದ ಕಥಾವಸ್ತುವುಳ್ಳ  ‘ಅಸ್ತ್ರ’  ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.  ಅಂತ್ಯಕ್ರಿಯೆ ಕೆಂಗೇರಿ ಬಂಡೆಮಠ ಬಳಿಯ ವಿದ್ಯುತ್‌ ಚಿತಾಗಾರದಲ್ಲಿ ಮಂಗಳವಾರ ಸಂಜೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.