ಪಿಯುಸಿ ಬಳಿಕ ಏನು? ಈ ಪ್ರಶ್ನೆಗೆ ಕೂಡಲೇ ಬರುವ ಉತ್ತರ ‘ಡಿಗ್ರಿಗೆ ಸೇರುವುದು.’ ಬಹಳ ಹಿಂದಿನಿಂದಲೂ ನಮ್ಮ ಶಿಕ್ಷಣ ವ್ಯವಸ್ಥೆಯ ಭಾಗವಾಗಿರುವಂಥದ್ದು ಪದವಿಶಿಕ್ಷಣ. ಪ್ರಧಾನವಾಗಿ ಮೂರು ವಿಷಯಗಳಲ್ಲಿ ಪದವಿ ಕೋರ್ಸ್‌ಗಳಿವೆ; ಅವೇ – ವಿಜ್ಞಾನ, ವಾಣಿಜ್ಯ ಮತ್ತು ಕಲೆ. ಈ ವಿಷಯಗಳು ಮತ್ತೆ ಹಲವು ‘ಕಾಂಬಿನೇಷನ್’ಗಳಲ್ಲಿ ಕವಲಾಗಿ ವಿಂಗಡಣೆಯಾಗಿರುತ್ತವೆ. ಪದವಿ ಎನ್ನುವುದು ಉನ್ನತ ವ್ಯಾಸಂಗಕ್ಕೂ ಉದ್ಯೋಗಾವಕಾಶಕ್ಕೂ ಅನಿವಾರ್ಯ. ಹೀಗಾಗಿ ಆಸಕ್ತಿಯನ್ನೂ ಅವಶ್ಯಕತೆಯನ್ನೂ ಅನುಸರಿಸಿ ಸರಿಯಾದ ಕೋರ್ಸನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಪದವಿಯ ಪ್ರಮಾಣಪತ್ರವನ್ನು ಕೊಡುವುದು ವಿಶ್ವವಿದ್ಯಾಲಯ. ಅದರ ವ್ಯಾಪ್ತಿಯಲ್ಲಿ ಹಲವು ಕಾಲೇಜುಗಳು ಸೇರಿರುತ್ತವೆ.
ಕರ್ನಾಟಕದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿರುವ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ರಾಜ್ಯದ ಉದ್ದಕ್ಕೂ ನೂರಾರು ಕಾಲೇಜುಗಳಿವೆ. ನಮ್ಮ ಆಸಕ್ತಿಯ ವಿಷಯವಿರುವ ಬಿ.ಎಸ್ಸಿ. ನಮಗೆ ಹತ್ತಿರದ ಕಾಲೇಜುಗಳಲ್ಲಿ ಇದೆಯೇ ಎಂದು ಪರೀಕ್ಷಿಸಿಕೊಂಡು, ಅಲ್ಲಿ ಸೇರಬಹುದಾಗಿದೆ.
ವಿಜ್ಞಾನದ ಪದವಿಯೇ ಬಿ. ಎಸ್ಸಿ. ಎಂದರೆ ‘ಬ್ಯಾಚುಲರ್ ಆಫ್ ಸೈನ್ಸ್’. ಇದರ ಒಟ್ಟು ಅವಧಿ ಮೂರು ವರ್ಷಗಳು. ಬೇರೆ ಬೇರೆ ವಿಷಯಗಳ ಕಾಂಬಿನೇಷನ್‌ಲ್ಲಿ ಲಭ್ಯ. ಶುದ್ಧ ವಿಜ್ಞಾನದ (Pure Science) ಕೆಲವೊಂದು ಪ್ರಮುಖ ಕಾಂಬಿನೇಷನ್‌ಗಳು ಹೀಗಿವೆ:
ಬಿ.ಇಡಿ ಓದಿದರೆ ಸರ್ಕಾರಿ ಉದ್ಯೋಗ ಖಚಿತ
ಇಂದಿನ ಯುವಜನಾಂಗಕ್ಕೆ ಬಿ.ಎಸ್ಸಿ. ಕೋರ್ಸ್‌ಗಳ ಬಗೆಗಿನ ಅರಿವು ಕಡಿಮೆ ಇದೆ. ಬಿ.ಎಸ್ಸಿ. ಓದಿದ ನಂತರ ಮುಂದೇನು ಎನ್ನುವ ಗೊಂದಲವು ಅವರಲ್ಲಿದೆ. ಆದರೆ ಬಿ.ಎಸ್ಸಿ.ಯಲ್ಲಿ ಪಿಸಿಎಂ, ಪಿಎಂಸಿಎಸ್ ಮುಂತಾದ ವಿಭಾಗಗಳಲ್ಲಿ ಅವಕಾಶಗಳ ಮಹಾಪೂರವೇ ಇದೆ. ಆದರೆ ಬಿ.ಎಸ್ಸಿ. ಬಯೋಟೆಕ್ನಾಲಜಿ, ಜೆನೆಟಿಕ್ಸ್‌ನಂತಹ ಕೋರ್ಸ್‌ಗಳಿಗೆ ಭಾರತದಲ್ಲಿ ಸಾಕಷ್ಟು ಅವಕಾಶಗಳು ದೊರೆಯುತ್ತಿಲ್ಲ. ನಮ್ಮ ಪಿಇಎಸ್ ಕಾಲೇಜಿನಲ್ಲಿ ಬಿ.ಎಸ್ಸಿ. ಹೊಸ ಕೋರ್ಸ್‌ಗಳನ್ನು ಈವರೆಗೆ ಪರಿಚಯಿಸಿಲ್ಲ. ಆದರೆ ಬಿ.ಎಸ್ಸಿ. ಸೆರಿಕಲ್ಚರ್, ಅಗ್ರಿಕಲ್ಚರ್‌ಗಳಿಗೆ ಅವಕಾಶ ಹೆಚ್ಚಿವೆ. ಆದರೆ ಈ ಕೋರ್ಸ್‌ನ ಅವಕಾಶಗಳ ಬಗ್ಗೆ ಜನರಿಗೆ ಅರಿವು ಕಡಿಮೆ ಇದೆ.
ಮೆಡಿಕಲ್, ಎಂಜಿನಿಯರಿಂಗ್ ಕೋರ್ಸ್‌ಗಳ ನಡುವೆ ಬಿ.ಎಸ್ಸಿ. ಇಂದಿಗೂ ತನ್ನ ಇರುವನ್ನು ಉಳಿಸಿಕೊಂಡಿದೆ. ಅದಕ್ಕೆ ಕಾರಣ ಎಂಜಿನಿಯರಿಂಗ್ ಕೋರ್ಸ್‌ಗಳ ವರ್ಚಸ್ಸು ಕಡಿಮೆಯಾಗುತ್ತಿರುವುದು. ಸುಮಾರು 60 ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚುತ್ತಿದ್ದಾರೆ ಎಂಬ ಸುದ್ದಿಯಿದೆ. ಪಿಸಿಎಂ, ಪಿಎಂಸಿಎಸ್ ಮಾಡಿ ಬಿ.ಇಡಿ ಓದಿದರೆ ಸರ್ಕಾರಿ ಕೆಲಸ ಖಚಿತ. ಏಕೆಂದರೆ ಇಂದು ಅನೇಕ ಶಾಲಾ–ಕಾಲೇಜುಗಳಲ್ಲಿ ಅಧ್ಯಾಪಕರ ಕೊರತೆ ಎದ್ದುಕಾಣುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಿ.ಎಸ್ಸಿ. ಕೋರ್ಸ್‌ಗಳತ್ತ ಜನರು ಮನಸ್ಸು ಮಾಡುತ್ತಿದ್ದಾರೆ. ಕಾರಣ ಕೆಲವು ಮಾಧ್ಯಮಗಳು ನಡೆಸುವ ಎಜುಕೇಷನ್ ಎಕ್ಸ್‌ಪೋ ಕಾರ್ಯಕ್ರಮಗಳು. ಪಿಯುಸಿಯಲ್ಲಿ ಸೈನ್ಸ್ ಓದಿದವರು ಮುಂದೆ ಬಿ.ಕಾಂ., ಬಿ.ಬಿ.ಎಂ.ನತ್ತ ಒಲವು ತೋರುತ್ತಿದ್ದಾರೆ. ಆದರೆ ಅಂತಹ ವಿದ್ಯಾರ್ಥಿಗಳಿಗೆ ಬಿ.ಎಸ್ಸಿ. ಕೋರ್ಸ್‌ಗಳ ಬಗ್ಗೆ ತಿಳಿಸಿ ಹೇಳುವ ಕೆಲಸವನ್ನು ಉಪನ್ಯಾಸಕರು ಮಾಡಬೇಕಾಗಿದೆ.
ಎಂಜಿನಿಯರಿಂಗ್ ಹಾಗೂ ಎಂ.ಟೆಕ್ ಮಾಡಿದ ವಿದ್ಯಾರ್ಥಿಗಳಿಗೆ ಸಂಶೋಧನೆಯಲ್ಲಿ ಅವಕಾಶಗಳು ಕಡಿಮೆ ಇರುತ್ತವೆ. ಸೈನ್ಸ್ ಮಾಡಿ ಬಿ.ಎಸ್ಸಿ. ಓದಿದವರಿಗೆ ಹಲವು ವಿಭಿನ್ನ ಕ್ಷೇತ್ರಗಳಲ್ಲಿ ಸಂಶೋಧನೆಗೆ ಅವಕಾಶವಿದೆ. ಐಐಎಸ್ಸಿಯಂತಹ ಸಂಸ್ಥೆಗಳಲ್ಲಿ ಅವಕಾಶ ಇದೆ. ಮಣ್ಣು, ಗಿಡ, ರಾಸಾಯನಿಕ – ಯಾವುದನ್ನೇ ತೆಗೆದುಕೊಂಡರೂ ಅದರ ಮೇಲೆ ಸಂಶೋಧನೆ ಮಾಡಬಹುದು. ಹಾಗಾಗಿ ಬಿ.ಎಸ್ಸಿ. ಓದುವುದು ಅವಶ್ಯಕ.
–ಎ. ವಿ. ಚಂದ್ರಶೇಖರ್, ಪ್ರಾಂಶುಪಾಲರು, ಪಿಇಎಸ್ ಡಿಗ್ರಿ ಕಾಲೇಜು
***
ಬಿ.ಎಸ್ಸಿ.ಯ ಕೆಲವು ಪ್ರಮುಖ ಕಾಲೇಜುಗಳು:
ಎಂ. ಇ. ಎಸ್. ಕಾಲೇಜು, ಬೆಂಗಳೂರು (mesinstitutions.org.in)
ನ್ಯಾಷನಲ್ ಕಾಲೇಜು, ಬೆಂಗಳೂರು (ncbgudi.com)
ಕರ್ನಾಟಕ ಕಾಲೇಜ್, ಧಾರವಾಡ (karnatakcollege.com)
ಯುವರಾಜಾಸ್ ಕಾಲೇಜು, ಮೈಸೂರು (ycm.uni-mysore.ac.in)
ಎಂ. ಎಸ್. ರಾಮಯ್ಯ ಕಾಲೇಜ್, ಬೆಂಗಳೂರು (msrcasc.edu.in)
ಅಜಿಂ ಪ್ರೇಮ್‌ಜಿ ಯುನಿವರ್ಸಿಟಿ, ಬೆಂಗಳೂರು (apu.edu.in)
ಆಳ್ವಾಸ್ ಕಾಲೇಜು, ಮೂಡುಬಿದಿರೆ (alvascollege.com)
ಮೌಂಟ್ ಕಾರ್ಮೆಲ್ ಕಾಲೇಜ್, ಬೆಂಗಳೂರು (mountcarmelcollege.co.in)
ಜೈನ್ ಯೂನಿವರ್ಸಿಟಿ, ಬೆಂಗಳೂರು (jainuniversity.ac.in)
ಗಾರ್ಡನ್ ಸಿಟಿ ಯುನಿವರ್ಸಿಟಿ, ಬೆಂಗಳೂರು (gardencity.university)
ಕ್ರೈಸ್ಟ್ ಯುನಿವರ್ಸಿಟಿ, ಬೆಂಗಳೂರು (christuniversity.ac.in)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.