ಬೆಂಗಳೂರು: ಲೋಕಾಯುಕ್ತ ಸಂಸ್ಥೆ ಯನ್ನು ಬಲಪಡಿಸಬೇಕೇ ಬೇಡವೇ ಎಂಬ ಜಿಜ್ಞಾಸೆಯನ್ನು ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಸೋಮವಾರ ಸದನದ ಮುಂದೆ ಪುಟ್ಟ ಕತೆಯ ಮೂಲಕ ಬಿಚ್ಚಿಟ್ಟರು.
‘ಸಂಪಾದಿಸಿದ ದುಡ್ಡನ್ನು ಹೇಗೆ ಖರ್ಚು ಮಾಡಬೇಕೆಂಬ ಬಗ್ಗೆ ತಲೆಕೆಡಿಸಿ ಕೊಂಡಿದ್ದ ಮರ್ಲಿನ್ ಮನ್ರೊ ಎಂಬ ಸಿನಿಮಾ ನಟಿ ಧರ್ಮಗುರುಗಳ ಸಲಹೆ ಕೇಳಲು ಹೋದಳಂತೆ. ಸಾಧ್ಯವಾದಷ್ಟು ಚರ್ಚ್‌ಗಳನ್ನು ಕಟ್ಟಿಸುವಂತೆ ಧರ್ಮ ಗುರುಗಳು ಸಲಹೆ ನೀಡಿದರು.
ಚರ್ಚ್‌ಗಳನ್ನು ಕಟ್ಟಿಸಿದರೂ ಮನ್ರೊಗೆ ಸಮಾಧಾನ ಆಗಲಿಲ್ಲ. ದೇವರು ಇದ್ದಾನೋ ಇಲ್ಲವೋ ಎಂಬ ಬಗ್ಗೆಯೇ ಆಕೆಗೆ ಸಂದೇಹ ಶುರುವಾ ಯಿತು. ಆಗ ಆಕೆ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಬಳಿಗೆ ಹೋಗಿ ಪ್ರಶ್ನಿಸಿದಳು. ಅದಕ್ಕೆ ಐನ್‌ಸ್ಟೈನ್ ನೀಡಿದ ಉತ್ತರ ಸೊಗಸಾಗಿದೆ. ದೇವರು ಇದ್ದಾನೆ ಎಂದು ನಂಬಿದಾಗಲೂ ಜಗತ್ತಿನಲ್ಲಿ ಪಾಪದ ಕೆಲಸಗಳು ಇಷ್ಟೊಂದು ಹೆಚ್ಚಾಗಿವೆ. ದೇವರು ಇಲ್ಲ ಎಂದರೆ ಪಾಪದ ಕೆಲಸಗಳು ಇನ್ನೆಷ್ಟು ಹೆಚ್ಚಾಗಲಿಕ್ಕಿಲ್ಲ!’ ಎಂದು ಪುಟ್ಟಣ್ಣಯ್ಯ ಕತೆ ಮುಗಿಸಿದಾಗ ಸದನದಲ್ಲಿ ನಗೆಯ ಅಲೆ ಎದ್ದಿತು.
ಸಿಬಿಐಯನ್ನು ಲೋಕಪಾಲ್‌ಗೆ ಸೇರಿ ಸುತ್ತೀರಾ: ‘ಸಿಬಿಐಯನ್ನು ಪ್ರತ್ಯೇಕ ಸಂಸ್ಥೆ ಎಂದು ಪರಿಗಣಿಸುವ ಬದಲು ಅದನ್ನು ಲೋಕಾಪಾಲ್ ವ್ಯಾಪ್ತಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೀರಾ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಸದಸ್ಯರಿಗೆ ಸವಾಲು ಹಾಕಿದರು.
ವಿಧಾನಸಭೆಯಲ್ಲಿ ಸೋಮವಾರ ಭ್ರಷ್ಟಾಚಾರ ನಿಯಂತ್ರಣ ದಳದ ಕುರಿತ ಚರ್ಚೆಯ ವೇಳೆ ಮಾತನಾಡಿದ ಅವರು, ‘ಸುಮ್ಮನೆ ಎಸಿಬಿಯನ್ನು ವಿರೋಧಿಸ ಬೇಡಿ. ಹರಿಯಾಣ, ಜಾರ್ಖಂಡ್, ಮಧ್ಯಪ್ರದೇಶ ಸೇರಿದಂತೆ ಬಿಜೆಪಿ ಆಡಳಿತದಲ್ಲಿರುವ ಅನೇಕ ರಾಜ್ಯಗಳಲ್ಲೂ ಎಸಿಬಿ ಕಾರ್ಯಾಚರಿಸುತ್ತಿದೆ. ಅವುಗಳ ನ್ನೂ ರದ್ದು ಪಡಿಸುವಂತೆ ಅಲ್ಲಿನ ಸರ್ಕಾರಗಳಿಗೆ ನೀವು ಪತ್ರ ಬರೆಯುತ್ತೀರಾ’ ಎಂದು ಅವರು ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.