ADVERTISEMENT

ಪ್ರಶಸ್ತಿ ವಾಪಸ್ ನೀಡಿದ ಅಕ್ಷತಾ ಕೆ. ಹುಂಚದಕಟೆı

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2015, 19:47 IST
Last Updated 18 ಅಕ್ಟೋಬರ್ 2015, 19:47 IST

ಶಿವಮೊಗ್ಗ: ಕವಯತ್ರಿ ಅಕ್ಷತಾ ಕೆ. ಹುಂಚದಕಟ್ಟೆ ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡಿದ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಅಕಾಡೆಮಿಗೆ ಹಿಂದಿರುಗಿಸಿದ್ದಾರೆ.

ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆ, ಮತೀಯ ಕಾರಣಕ್ಕಾಗಿ ನಡೆದ ದಾದ್ರಿಯ ಘಟನೆ, ರೈತರ ಆತ್ಮಹತ್ಯೆ, ಉತ್ತರಪ್ರದೇಶದ ಗೌತಮಬುದ್ಧ ನಗರದಲ್ಲಿ ದಲಿತ ಕುಟುಂಬವನ್ನು ವಿವಸ್ತ್ರಗೊಳಿಸಿದ ಅಮಾನವೀಯತೆ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಅನೇಕ ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ವಿರೋಧಿಸಿ ಪ್ರಶಸ್ತಿ ಹಿಂದಿರುಗಿಸಿದ್ದಾರೆ.

ರೈತ ಹೋರಾಟಗಾರ ಕಡಿದಾಳು ಶಾಮಣ್ಣ ಅವರ ಆತ್ಮಕಥನ ‘ಕಾಡ ತೊರೆಯ ಜಾಡು’ ಕೃತಿಯ ನಿರೂಪಣೆಗಾಗಿ 2011ರಲ್ಲಿ ಜೀವನ ಚರಿತ್ರೆ ವಿಭಾಗದಲ್ಲಿ ಅತ್ಯುತ್ತಮ ಕೃತಿ ಎಂದು ಗುರುತಿಸಿ ನೀಡಿದ್ದ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಅವರು ಹಿಂದಿರುಗಿಸಿರುವುದಾಗಿ ಭಾನುವಾರ ಅಕಾಡೆಮಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿಯ ಮೊತ್ತ ₹5 ಸಾವಿರ ಪ್ರಶಸ್ತಿ ಫಲಕ, ನೆನಪಿನ ಕಾಣಿಕೆಯನ್ನು ವಾಪಸ್ ಮಾಡುವುದಾಗಿ ‘ಪ್ರಜಾವಾಣಿ’ಗೆ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.