ADVERTISEMENT

ಪ್ರೊ.ಕೆ.ಎಸ್‌.ಭಗವಾನ್‌ಗೆ ‘ಲೋಕಾಯತ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2014, 19:30 IST
Last Updated 6 ಆಗಸ್ಟ್ 2014, 19:30 IST

ದಾವಣಗೆರೆ: ಪ್ರೊ.ಬಿ.ವಿ.ವೀರಭದ್ರಪ್ಪ ಪ್ರತಿ­­­ಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಕೊಡ­­­­­­ಮಾಡುವ ರಾಜ್ಯ ಮಟ್ಟದ ‘ಲೋಕಾ­­­­­­­­ಯತ’ ಪ್ರಶಸ್ತಿಗೆ ವಿಚಾರವಾದಿ ಪ್ರೊ.ಕೆ.­­­ಎಸ್‌.ಭಗವಾನ್‌ ಅವರನ್ನು ಆಯ್ಕೆ ­ಮಾಡ­ಲಾಗಿದೆ.

ಪ್ರಶಸ್ತಿಯು ₨ 10 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಪ್ರಥಮ ವರ್ಷದ ಪ್ರಶಸ್ತಿಗೆ ಭಗ­ವಾನ್‌ ಅವ­ರನ್ನು ಆಯ್ಕೆ ಮಾಡ­ಲಾ­ಗಿದ್ದು, ಆ.9­ರಂದು ನಗ­­­ರದ ಕುವೆಂಪು ಕನ್ನಡ ಭವನದಲ್ಲಿ ನಡೆಯುವ ಕಾರ್ಯ­­­­ಕ್ರಮ­ದಲ್ಲಿ ಪ್ರಶಸ್ತಿ ಪ್ರದಾನ ಮಾಡ­­ಲಾ­­­ಗು­ವುದು ಎಂದು­ ಜಾನಪದ ತಜ್ಞ ಡಾ.ಎಂ.­ಜಿ.­ಈಶ್ವ­ರಪ್ಪ ಪತ್ರಿಕಾ­ಗೋಷ್ಠಿ­ಯಲ್ಲಿ ಬುಧವಾರ ತಿಳಿಸಿದರು.

ಮೈಸೂರಿನ ಮಹಾ­ರಾಜ ಕಾಲೇಜಿ­ನಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕ­ರಾ­ಗಿದ್ದ ಭಗ­ವಾನ್‌ ಅವರು ವಿಮರ್ಶೆ, ಅನು­ವಾದ ಕ್ಷೇತ್ರ­ದಲ್ಲಿ ಕೆಲಸ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.