ADVERTISEMENT

ಬಹುಮುಖ ಪ್ರತಿಭೆ ಗೋಪಾಲ ವಾಜಪೇಯಿ ನಿಧನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2016, 17:49 IST
Last Updated 20 ಸೆಪ್ಟೆಂಬರ್ 2016, 17:49 IST
ಗೋಪಾಲ ವಾಜಪೇಯಿ (ಕೃಪೆ: ಫೇಸ್‍ಬುಕ್)
ಗೋಪಾಲ ವಾಜಪೇಯಿ (ಕೃಪೆ: ಫೇಸ್‍ಬುಕ್)   

ಬೆಂಗಳೂರು: ಸಿನಿಮಾ ಸಾಹಿತಿ, ಸಂಭಾಷಣೆಕಾರ, ನಟ, ಪತ್ರಕರ್ತ ಗೋಪಾಲ ವಾಜಪೇಯಿ (65) ಅವರು ಮಂಗಳವಾರ ನಿಧನರಾಗಿದ್ದಾರೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಕುಸುಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ರಾತ್ರಿ ಸುಮಾರು 9.30ರ ವೇಳೆಗೆ ವಾಜಪೇಯಿ ಅವರು ಕೊನೆಯುಸಿರೆಳೆದಿದ್ದಾರೆ.

ಆತ್ಮೀಯರಿಂದ ಗೋಪಾಲ ಕಾಕಾ ಎಂದೇ ಕರೆಯಲ್ಪಡುತ್ತಿದ್ದ ಗದಗದ ಲಕ್ಷ್ಮೇಶ್ವರದ ವಾಜಪೇಯಿ ಅವರು  ಸಂತ ಶಿಶುನಾಳ ಷರೀಫ ಚಿತ್ರದಿಂದ ಸಂಭಾಷಣಕಾರನಾಗಿ ಚಿತ್ರರಂಗ ಪ್ರವೇಶಿಸಿ, ಸಂಗ್ಯಾ ಬಾಳ್ಯ, ನಾಗಮಂಡಲ ಮೊದಲಾದ ಚಿತ್ರಗಳಿಗೆ ಹಾಡು ಬರೆದಿದ್ದಾರೆ, ಇತ್ತೀಚೆಗೆ ತೆರೆ ಕಂಡ ಸಂತೆಯಲ್ಲಿ ನಿಂತ ಕಬೀರ ಚಿತ್ರಕ್ಕೆ ವಾಜಪೇಯಿ ಅವರು ಸಾಹಿತ್ಯ ರಚಿಸಿದ್ದರು.


ಪತ್ರಿಕಾ ಸಂಪಾದಕರಾಗಿ, ಕವಿ, ನಾಟಕ ರಚನಕಾರರಾಗಿ, ದೂರದರ್ಶನ ಕಾರ್ಯಕ್ರಮ ಸಂಯೋಜಕರಾಗಿ, ಚಿತ್ರ ಸಂಭಾಷಣಕಾರರಾಗಿ, ಗೀತ ರಚನೆಕಾರರಾಗಿ, ಅಂಕಣಕಾರರಾಗಿ, ರಂಗನಟರಾಗಿ, ನಾಟಕ ಅಕಾಡೆಮಿ ಸದಸ್ಯರಾಗಿ, ಆಕಾಶವಾಣಿ, ಕಿರುತೆರೆ, ಜಾಹಿರಾತು ಕ್ಷೇತ್ರ, ಸಿನಿಮಾ ಹೀಗೆ ವಾಜಪೇಯಿ ಅವರು ಎಲ್ಲೆಡೆ ತಮ್ಮ ಛಾಪು ಮೂಡಿಸಿದ್ದರು.

ADVERTISEMENT

('ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿ ಶಂಕರ್‍ನಾಗ್ ಜತೆ ಗೋಪಾಲ ವಾಜಪೇಯಿ)

'ದೊಡ್ಡಪ್ಪ' ನಾಟಕ, ಯಂಡಮೂರಿ ವೀರೇಂದ್ರನಾಥರ ಅನುವಾದವಾದ 'ಯಶಸ್ಸಿನತ್ತ ಪಯಣ'’ ಮತ್ತು ಭೀಶಮ್ ಸಾಹ್ನಿಯವರ ಮೂಲ ಹಿಂದಿ ನಾಟಕದ ಅನುವಾದ '‘ಸಂತ್ಯಾಗ ನಿಂತಾನ ಕಬೀರ’'ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.

ಮೃತದೇಹವನ್ನು ರಾತ್ರಿ 11ರಿಂದ 11.30ರ ವರೆಗೆ  ಹನುಮಂತನಗರದ ಕೃಷ್ಣ ಆಸ್ಪತ್ರೆಯಲ್ಲಿರಿಸಲಾಗುವುದು. ಗುರುವಾರ ಅಂತ್ಯ ಸಂಸ್ಕಾರ ನಡೆಯಲಿದೆ.

ವಾಜಪೇಯಿ ಅವರು ರಚಿಸಿದ 'ನಾಗಮಂಡಲ' ಚಿತ್ರದ 'ಕಂಬದ ಮ್ಯಾಲಿನ ಗೊಂಬೆಯೆ' ಹಾಡು

</p></p>

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.