ಮಂಗಳೂರು: ಯಕ್ಷಗಾನ ಕಲಾವಿದೆ ವಿದ್ಯಾ ಕೋಳ್ಯೂರು ಅವರನ್ನು ಕೇಂದ್ರ ಸಂಗೀತ ಅಕಾಡೆಮಿ ಕೊಡಮಾಡುವ 2011ನೇ ಸಾಲಿನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಪ್ರಸಿದ್ಧ ಯಕ್ಷಗಾನ ಕಲಾವಿದ ಕೋಳ್ಯೂರು ರಾಮಚಂದ್ರ ರಾವ್ ಮತ್ತು ಯಶೋಧಾ ದಂಪತಿ ಪುತ್ರಿಯಾಗಿರುವ ವಿದ್ಯಾ ಯಕ್ಷಗಾನ ಕಲಾವಿದೆಯಾಗಿ ವಿವಿಧ ಪಾತ್ರಗಳಲ್ಲಿ ಮಿಂಚಿದ್ದಾರೆ.
19 ರಾಜ್ಯಗಳಲ್ಲಿ 340ಕ್ಕೂ ಹೆಚ್ಚು ಪ್ರದರ್ಶನಗಳನ್ನು ಹಿಂದಿ ಭಾಷೆಯಲ್ಲಿ ನೀಡಿದ್ದಾರೆ. ಬಿಸ್ಮಿಲ್ಲಾ ಖಾನ್ ಪುರಸ್ಕಾರವು ಯಕ್ಷಗಾನಕ್ಕೆ ದೊರೆತ ಮೊದಲ ರಾಷ್ಟ್ರಮಟ್ಟದ ಪುರಸ್ಕಾರವಾಗಿದೆ. ಪ್ರಶಸ್ತಿಯು ರೂ 25 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ ಎಂದು ತೆಂಕುತಿಟ್ಟು ಯಕ್ಷಗಾನ ಅಕಾಡೆಮಿಯ ನಿರ್ದೇಶಕ ಸರವು ಕೃಷ್ಣ ಭಟ್ಟ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.