ADVERTISEMENT

ಬೇಂದ್ರೆ ಗ್ರಂಥ ಬಹುಮಾನ ವಿತರಣೆ

ರಾಜ್ಯದ ಏಳು ಯುವ ಲೇಖಕರು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2015, 19:53 IST
Last Updated 26 ಅಕ್ಟೋಬರ್ 2015, 19:53 IST

ಧಾರವಾಡ: ವರಕವಿ ದ.ರಾ.ಬೇಂದ್ರೆ ಅವರ 34ನೇ ಪುಣ್ಯಸ್ಮರಣೆ ಅಂಗವಾಗಿ ಪ್ರಸಕ್ತ ಸಾಲಿನ ಬೇಂದ್ರೆ ಗ್ರಂಥ ಬಹುಮಾನವನ್ನು ಸೋಮವಾರ ಎಂಟು ಯುವ ಲೇಖಕರಿಗೆ ಪ್ರದಾನ ಮಾಡಲಾಯಿತು.

ವಿಜೇತರಿಗೆ ₹5 ಸಾವಿರ ನಗದು ಹಾಗೂ ಫಲಕ ನೀಡಲಾಯಿತು.

ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಇಲ್ಲಿನ ಸಾಧನಕೇರಿಯಲ್ಲಿರುವ ಬೇಂದ್ರೆ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂಡ್ಯದ ರಾಜೇಂದ್ರ ಪ್ರಸಾದ್‌ (ಕೋವಿ ಮತ್ತು ಕೊಳಲು ಕವನ ಸಂಕಲನ), ಕುಮಟಾದ ಕರ್ಕಿ ಕೃಷ್ಣಮೂರ್ತಿ (ಮಳೆ ಮಾರುವ ಹುಡುಗ ಸಣ್ಣಕತೆ), ಸವದತ್ತಿಯ ಆನಂದ ಭೋವಿ (ಹಿಡಿ ಮಣ್ಣಿನ ಬೊಗಸೆ ಸಣ್ಣ ಕತೆ), ಶಿವಮೊಗ್ಗದ ಡಾ.ಕೆ.ಎಸ್‌. ಪವಿತ್ರಾ (ಮಹಿಳಾ ಮನೋಧರ್ಮ ಪ್ರಬಂಧ),

ಶಿವಮೊಗ್ಗದ ಡಾ.ಕೆ.ಎಸ್‌.ಶುಭ್ರತಾ (ಹಿಂಸೆ ದೌರ್ಜನ್ಯಕ್ಕೊಳಗಾದ ಮಕ್ಕಳ ಮನೋವಿಕಾಸ ಪ್ರಬಂಧ), ಗಂಗಾವತಿಯ ಡಾ.ಜಾಜಿ ದೇವೇಂದ್ರಪ್ಪ (ದೇವರ ರಾಜಕೀಯ ತತ್ವ ಅನುವಾದ ಕೃತಿ) ಹಾಗೂ ಶಿವಮೊಗ್ಗದ ಅಂತಃಕರಣ (ಮಿಂಚಿನ ಬೆಳಕು ಬಾಲಸಾಹಿತ್ಯ ಕೃತಿ) ಅವರಿಗೆ ಲೋಕೋಪಯೋಗಿ ಇಲಾಖೆ ನಿವೃತ್ತ ಕಾರ್ಯದರ್ಶಿ ಜಿ.ಸಿ.ತಲ್ಲೂರ ಬಹುಮಾನ ವಿತರಿಸಿದರು. ಅಮೆರಿಕದ ಬಿ.ಎಸ್‌.ಕರುಣಾ ಬಂದಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.