ತುಮಕೂರು: ಕೋಮುವಾದಿ, ಸುಳ್ಳು ಕೃತಿಗಳನ್ನು ಬರೆದ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಗೆಳೆತನದಿಂದಲೇ ರಾಷ್ಟ್ರೀಯ ಪ್ರಾಧ್ಯಾಪಕರಾದರು. ಸರಸ್ವತಿ ಸಮ್ಮಾನಕ್ಕೆ ಭಾಜನರಾದವರು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಆರೋಪಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯದ ತಾತ್ವಿಕ ನೆಲೆಗಳು ಒಂದು ಅವಲೋಕನ’ ಕುರಿತು ಮಾತನಾಡಿದರು.
ಕೋಮುವಾದಿ ಶಕ್ತಿಗಳು ಇರಲೇಬಾರದು ಎಂದು ವಿರೋಧಿಸಿದ ಅನಂತಮೂರ್ತಿ ಅವರಿಗೆ ದೇಶ ಬಿಟ್ಟು ಹೋಗಿ ಎಂದರು. ಅನಂತಮೂರ್ತಿ ಬದುಕಿರುವವರೆಗೂ ಭೈರಪ್ಪ ಅವರು ವಿರೋಧಿಸಿಕೊಂಡೇ ಬಂದರು. ನಂತರ ದೇಶವನಷ್ಟೇ ಅಲ್ಲ, ಜಗತ್ತನ್ನೇ ಬಿಟ್ಟು ಹೋದರು. ಬಳಿಕ ಭೈರಪ್ಪ ರಾಷ್ಟ್ರೀಯ ಪ್ರಾಧ್ಯಾಪಕರಾದರು ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.