ADVERTISEMENT

‘ಮಹಿಳೆಯರಿಗೆ ರಕ್ಷಣೆ ಇಲ್ಲ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 20:06 IST
Last Updated 23 ಮಾರ್ಚ್ 2018, 20:06 IST
ಶಾಸಕ ವೈ.ಎ.ನಾರಾಯಣಸ್ವಾಮಿ ಮಾತನಾಡಿದರು. ಬಿಜೆಪಿ ರಾಜ್ಯಕಾರ್ಯದರ್ಶಿ ಎ.ರವಿ, ಬಿಜೆಪಿ ಬ್ಯಾಟರಾಯನಪುರ ಕ್ಷೇತ್ರ ಘಟಕದ ಅಧ್ಯಕ್ಷ ಪಿ.ಕೆ.ರಾಜಗೋಪಾಲ್, ಪಕ್ಷದ ಮುಖಂಡರಾದ ವೆಂಕಟೇಶ್, ದೊಡ್ಡಬಸವರಾಜು, ಡಿ.ಜಗನ್ನಾಥ್, ಮುನಿಹನುಮಪ್ಪ ಇದ್ದಾರೆ
ಶಾಸಕ ವೈ.ಎ.ನಾರಾಯಣಸ್ವಾಮಿ ಮಾತನಾಡಿದರು. ಬಿಜೆಪಿ ರಾಜ್ಯಕಾರ್ಯದರ್ಶಿ ಎ.ರವಿ, ಬಿಜೆಪಿ ಬ್ಯಾಟರಾಯನಪುರ ಕ್ಷೇತ್ರ ಘಟಕದ ಅಧ್ಯಕ್ಷ ಪಿ.ಕೆ.ರಾಜಗೋಪಾಲ್, ಪಕ್ಷದ ಮುಖಂಡರಾದ ವೆಂಕಟೇಶ್, ದೊಡ್ಡಬಸವರಾಜು, ಡಿ.ಜಗನ್ನಾಥ್, ಮುನಿಹನುಮಪ್ಪ ಇದ್ದಾರೆ   

ಬೆಂಗಳೂರು: ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಗೂಂಡಾಗಿರಿ, ದೌರ್ಜನ್ಯ, ಅತ್ಯಾಚಾರ ಹಾಗೂ ಅಪರಾಧದಲ್ಲಿ ದೇಶದಲ್ಲೇ ನಂ.1 ಸ್ಥಾನ ಗಳಿಸಿದೆ. ಇಲ್ಲಿ ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ರಕ್ಷಣೆ ಇಲ್ಲದಂತಾಗಿದೆ’ ಎಂದು ಶಾಸಕವೈ.ಎ.ನಾರಾಯಣ ಸ್ವಾಮಿ ಆರೋಪಿಸಿದರು.

ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಮಾರೇನಹಳ್ಳಿಯಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಗರದಲ್ಲಿ ಬಡವರಿಗೆ ಒಂದೇ ಒಂದು ನಿವೇಶನಅಥವಾ ಮನೆ ನೀಡಿಲ್ಲ. ಇದು ಕೇವಲ ಲೂಟಿ ಸರ್ಕಾರ. ಯಾವುದೇ ಕಚೇರಿಗೆ ಹೋದರೂ ಬಡಜನರ ಕೆಲಸ ಗಳು ಆಗುತ್ತಿಲ್ಲ. ಎಲ್ಲದಕ್ಕೂ ಲಂಚ ಕೇಳುತ್ತಾರೆ. ಇಂತಹ ಭ್ರಷ್ಟ ಸರ್ಕಾರ ವನ್ನು ಕಿತ್ತೊಗೆಯಲು ಜನರು ಸಂಕಲ್ಪ ಮಾಡಬೇಕು ಎಂದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಎ.ರವಿ ಮಾತನಾಡಿ, ’ಪ್ರಧಾನಿ ಮೋದಿಯವರ ಆಡಳಿತದ ವೈಖರಿ, ಅಭಿವೃದ್ಧಿ ಕಾರ್ಯಗಳು ಹಾಗೂ ದೂರದೃಷ್ಟಿಯನ್ನು ಮೆಚ್ಚಿಕೊಂಡಿರುವ ಜನರು, ಬಿಜೆಪಿಗೆ ಬೆಂಬಲ ಸೂಚಿಸುತ್ತಿದ್ದಾರೆ. 23 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ದಲ್ಲಿದೆ’ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.