ADVERTISEMENT

ಮುಕ್ತ ವಿ.ವಿ: ಸಿಪಿಕೆ ಸೇರಿ ಮೂವರಿಗೆ ಗೌರವ ಡಾಕ್ಟರೇಟ್‌

​ಪ್ರಜಾವಾಣಿ ವಾರ್ತೆ
Published 5 ಮೇ 2014, 19:30 IST
Last Updated 5 ಮೇ 2014, 19:30 IST

ಮೈಸೂರು: ಸಾಹಿತಿ ಸಿ.ಪಿ. ಕೃಷ್ಣ­ಕುಮಾರ್‌, ಖ್ಯಾತ ವಿಮರ್ಶಕ ಜಿ.ಎಚ್‌. ನಾಯಕ ಮತ್ತು ರಾಜ­ಕೀಯ ಚಿಂತಕ ಡಾ.ಆನಂದ್‌ ತೇಲ್‌ ತುಂಬ್ಡೆ ಅವರನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲ­ಯವು (ಕೆಎಸ್‌­ಒಯು)  ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಿದೆ ಎಂದು ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್‌ ತಿಳಿಸಿದ್ದಾರೆ.

ಮೇ 10ರಂದು ನಗರದ ಮಾನಸ ಗಂಗೋತ್ರಿಯ ಸೆನೆಟ್ ಸಭಾಂಗಣದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ­ದಲ್ಲಿ ಈ ಮೂರು ಗಣ್ಯರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡ­ಲಾಗು­ವುದು.

ಜಾಮಿಯಾ ಮಿಲಿಯಾ ಇಸ್ಲಾ­ಮಿಯಾ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಪ್ರೊ.ಮುಶಿರುಲ್ ಹಸನ್ ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶ­ಪಾಂಡೆ ಹಾಗೂ ಕುಲಪತಿ
ಪ್ರೊ.ಎಂ.­ಜಿ.ಕೃಷ್ಣನ್ ಸಮಾರಂಭದಲ್ಲಿ ಭಾಗ­ವಹಿ­ಸುವರು.

ಪುರಸ್ಕಾರಕ್ಕೆ ಆಯ್ಕೆ­ಯಾಗಿ­ರುವ ಜಿ.ಎಚ್. ನಾಯಕ ವಿಮರ್ಶಾ ಕ್ಷೇತ್ರ­ದಲ್ಲಿ, ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಚುಟುಕು ಕವಿತೆಗಳಿಗೆ ಹೆಸರು ವಾಸಿ­ಯಾಗಿ­­ದ್ದಾರೆ.  ದಲಿತ ಚಳವಳಿಯ ಹಿನ್ನೆಲೆ­ಯು­ಳ್ಳ ಸಾಮಾ­ಜಿಕ ಕಾರ್ಯ­ಕರ್ತ ಹಾಗೂ ರಾಜ­ಕೀಯ ವಿಶ್ಲೇಷಕ ಡಾ.­ಆನಂದ್ ತೇಲ್ ತುಂಬ್ಡೆ ಅವರು ಡಾ.­ಬಾಬಾ ಸಾಹೇಬ್ ಅಂಬೇಡ್ಕರ್ ಮೊಮ್ಮಗಳ ಪತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.