ಬೆಂಗಳೂರು: ಮೈಸೂರು ರಂಗಾಯಣದ ನಿರ್ದೇಶಕರಾಗಿ ಖ್ಯಾತ ರಂಗಕರ್ಮಿ ಜನಾರ್ದನ್ (ಜನ್ನಿ) ನೇಮಕಗೊಂಡಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯ ಪದವೀಧರರಾದ ಅವರು, ಮೈಸೂರಿನಲ್ಲಿ ನೆಲೆ ನಿಂತು ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಮೈಸೂರು ವರದಿ: ‘ರಂಗಾಯಣದ ಒಟ್ಟು ಒಳಿತಿನ, ಆರೋಗ್ಯಪೂರ್ಣ ಬೆಳವಣಿಗೆಗೆ ಶ್ರಮಿಸುವೆ’ ಎಂದು ಜನ್ನಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.
‘ನಾಡಿನ ಎಲ್ಲ ರಂಗಕರ್ಮಿಗಳ ಸಹಕಾರದಲ್ಲಿ ಹೊಸ ರೀತಿಯ, ಹೊಸ ಆಲೋಚನೆಯ ರಂಗಾಯಣವನ್ನು ಕಟ್ಟಲು, ಈ ಮೂಲಕ ರಂಗ ಚಳವಳಿ ರೂಪಿಸಲು ಅವಕಾಶ ಸಿಕ್ಕಿದೆ’ ಎಂದು ಖುಷಿಯಾಗಿ ಹೇಳಿದರು.
ಜನ್ನಿ ಅವರು ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ರಂಗ ಶಿಕ್ಷಕರಾಗಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.