ADVERTISEMENT

ರಾಷ್ಟ್ರೀಯ ವಿಜ್ಞಾನ ಚಿತ್ರೋತ್ಸವಕ್ಕೆ ‘ಕಾನ್ಮನೆ ನರ್ಚರಿಂಗ್ ನೇಚರ್‌’ ಆಯ್ಕೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2016, 19:40 IST
Last Updated 16 ಜನವರಿ 2016, 19:40 IST

ಶಿರಸಿ: ತಾಲ್ಲೂಕಿನ ಕಳವೆ ಕಾನ್ಮನೆಯ ನಿಸರ್ಗ ಜ್ಞಾನ ಕೇಂದ್ರದಲ್ಲಿನ ದೇಸಿ ಜ್ಞಾನದ ಪರಿಸರ ಶಿಕ್ಷಣ ಪ್ರಯೋಗದ ಕುರಿತು ಮೈಸೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರ (ಇಎಂಆರ್‌ಸಿ) ನಿರ್ಮಿಸಿರುವ ‘ಕಾನ್ಮನೆ ನರ್ಚರಿಂಗ್ ನೇಚರ್‌’ ಕಿರುಚಿತ್ರ 6ನೇ ರಾಷ್ಟ್ರೀಯ ವಿಜ್ಞಾನ ಚಿತ್ರೋತ್ಸವ ಸ್ಪರ್ಧೆಗೆ ಆಯ್ಕೆಯಾಗಿದೆ.

ದೇಶದ ವಿವಿಧ ಭಾಗಗಳಿಂದ ಸ್ಪರ್ಧೆಗೆ ಬಂದಿದ್ದ 144 ಚಿತ್ರಗಳ ಪೈಕಿ 12 ಆಯ್ಕೆಯಾಗಿದ್ದು, ಫೆಬ್ರು ವರಿ 9 ರಿಂದ 13ರವರೆಗೆ ಮುಂಬೈ ನಲ್ಲಿ ನಡೆಯಲಿರುವ ಚಿತ್ರೋತ್ಸವದಲ್ಲಿ ಪ್ರದರ್ಶ ನಗೊಳ್ಳಲಿವೆ. ಇಎಂಆರ್‌ಸಿ ನಿರ್ದೇಶಕ ಡಾ. ನಿರಂಜನ ವಾನಳ್ಳಿ ಕಿರುಚಿತ್ರವನ್ನು ನಿರ್ದೇಶಿಸಿದ್ದು, ಕೆ. ಗೋಪಿನಾಥ ನಿರ್ಮಿಸಿದ್ದಾರೆ  ಎಂದು ಬರಹಗಾರ ಶಿವಾನಂದ ಕಳವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳವೆಯಲ್ಲಿರುವ ನಿಸರ್ಗ ಜ್ಞಾನ ಕೇಂದ್ರದಲ್ಲಿ  ಪರಿಸರ ಆಟ, ಮರಗಳ ಕತೆ, ನೆಲಜಲ ಸಂರಕ್ಷಣೆ, ಪ್ರಾತ್ಯಕ್ಷಿಕೆ, ಸಸ್ಯ ಚಮತ್ಕಾರ, ಚಾರಣಗಳ ಮೂಲಕ ‘ನಿಸರ್ಗ ವಿಸ್ಮಯ’ ಪರಿಸರ ಶಿಕ್ಷಣದ ಕಾರ್ಯಕ್ರಮಗಳನ್ನು ಶಿವಾನಂದ ನಡೆಸುತ್ತಿ ದ್ದಾರೆ. ಅವರು ಸಂಘಟಿಸುತ್ತಿರುವ ಪರಿಸರ ಶಿಕ್ಷಣ ಚಟುವಟಿಕೆಗಳ ಕುರಿತು 15 ನಿಮಿಷದ ಈ ಕಿರುಚಿತ್ರ ನಿರ್ಮಾಣವಾಗಿದೆ.

ಕಳವೆ, ಯಾಣ, ಬಕ್ಕಳ ಸಸ್ಯೋದ್ಯಾನ, ಅಂಕೋಲಾ ವಿಭೂತಿ ಜಲಪಾತಗಳಲ್ಲಿ ಕಳೆದ ವರ್ಷ ಜೂನ್‌ನಲ್ಲಿ ಚಿತ್ರೀಕರಣ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.