ADVERTISEMENT

ರಿಕಿಗೆ ರೂ 25 ಲಕ್ಷ ಬಹುಮಾನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2015, 19:30 IST
Last Updated 16 ಫೆಬ್ರುವರಿ 2015, 19:30 IST

ಬೆಂಗಳೂರು: ಪ್ರತಿಷ್ಠಿತ ಗ್ರಾಮಿ ಪ್ರಶಸ್ತಿ ಪುರಸ್ಕೃತ, ಬೆಂಗಳೂರಿನ ಸಂಗೀತ ನಿರ್ದೇ­ಶಕ ರಿಕಿ ಕೇಜ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೂ 25 ಲಕ್ಷ ನಗದು ಬಹುಮಾನ ಪ್ರಕಟಿಸಿದರು.

ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸೋಮ­ವಾರ ನಡೆದ ವಿಶೇಷ ಕಾರ್ಯಕ್ರಮ­ದಲ್ಲಿ ರಿಕಿ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದ ನಂತರ, ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

‘ಬೆಂಗಳೂರಿನ ಬಿಷಪ್ ಕಾಟನ್ ಶಾಲೆ ವಿದ್ಯಾರ್ಥಿಯಾಗಿದ್ದ ರಿಕಿ ಸಂಗೀತ ಕ್ಷೇತ್ರಕ್ಕೆ ಸಂಪೂರ್ಣವಾಗಿ ಅರ್ಪಿಸಿ­ಕೊಂಡಿ­­ದ್ದಾರೆ. ಇವರ ಸಾಧನೆ ಇಡೀ ದೇಶಕ್ಕೆ ಹೆಮ್ಮೆ ತರುವಂಥದ್ದು’ ಎಂದು ಮುಖ್ಯಮಂತ್ರಿ­ಗಳು ಬಣ್ಣಿಸಿದರು.

ಮಹಾತ್ಮ ಗಾಂಧೀಜಿ ಮತ್ತು ನೆಲ್ಸನ್ ಮಂಡೇಲಾ ಅವರ ತತ್ವಗಳನ್ನು ಸಾರುವ ‘ವಿಂಡ್ಸ್ ಆಫ್‌ ಸಂಸಾರ’ ಆಲ್ಬಂ ಧ್ವನಿ ಮುದ್ರಿಕೆಯನ್ನು ರಿಕಿ ಇದೇ ಸಂದರ್ಭ­ದಲ್ಲಿ ಸಿದ್ದರಾಮಯ್ಯ ಅವರಿಗೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.