ಜಮಖಂಡಿ (ಬಾಗಲಕೋಟೆ ಜಿಲ್ಲೆ): ‘ಶರಣ ಸಂಸ್ಕೃತಿ ಉತ್ಸವ ಮತ್ತು ಜಾನಪದ ಕಲಾಮಹೋತ್ಸವ’ ಅಂಗವಾಗಿ ನೀಡಲಾಗುವ ರಾಜ್ಯ ಮಟ್ಟದ ಪ್ರಶಸ್ತಿಗೆ ಆರು ಜನರನ್ನು ಆಯ್ಕೆ ಮಾಡಲಾಗಿದೆ.
ಶರಣರ ಕುರಿತು 40 ನಾಟಕಗಳನ್ನು ಬರೆದಿರುವ ದಾವಣಗೆರೆಯ ವಿ.ಸಿದ್ಧರಾಮಣ್ಣ (ಬಸವ ಚೇತನ), 400 ಅನಾಥ ಮಕ್ಕಳನ್ನು ಸಾಕಿ ಸಲುಹಿದ ಭಾಲ್ಕಿಯ ಡಾ.ಬಸವಲಿಂಗ ಪಟ್ಟದ್ದೇವರು (ದಾಸೋಹ ರತ್ನ), ಕೃಷಿ ಋಷಿ ಎಂದೇ ಗುರುತಿಸಲ್ಪಡುವ ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಬಬಲಾದ ಗುರುಪಾದಲಿಂಗ ಶ್ರೀ (ಕೃಷಿ ಚೇತನ), ಬೆಂಗಳೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು. ಚನ್ನಬಸಪ್ಪ (ವಚನಶ್ರೀ), ಬಳ್ಳಾರಿ ಜಿಲ್ಲೆಯ ಚೇಳ್ಳಗುರ್ಕಿ ಗ್ರಾಮದ ಅಂಧ ಸಾಧಕಿ ಅಶ್ವಿನಿ ಅಂಗಡಿ(ಸಿದ್ಧಶ್ರೀ) ಹಾಗೂ ರಾಯಚೂರು ಜಿಲ್ಲೆಯ ಮಾನ್ವಿಯ ಅಂಬಯ್ಯ ನುಲಿ (ಕಲಾಶ್ರೀ) ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಗುರುಕುಲದ ಅಧ್ಯಕ್ಷ ಡಾ.ಈಶ್ವರ ಮಂಟೂರ ಸೋಮವಾರ ತಿಳಿಸಿದರು.
ತಾಲ್ಲೂಕಿನ ಹುನ್ನೂರ–ಮಧುರಖಂಡಿಯ ಬಸವಜ್ಞಾನ ಗುರುಕುಲದ ಆಶ್ರಯದಲ್ಲಿ ಡಿ.25 ರಿಂದ 27 ರ ವರೆಗೆ ನಡೆಯುವ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.