ಬೆಂಗಳೂರು: ಕವಿ ಚೆನ್ನವೀರ ಕಣವಿ ಸಮಿತಿ ನೀಡಿದ್ದ ವರದಿಯ ಅನುಸಾರ ನಾಡಗೀತೆಯನ್ನು ಸಂಕ್ಷಿಪ್ತಗೊಳಿಸಿ, ಯಾವ ಧಾಟಿಯಲ್ಲಿ ಹಾಡಬೇಕು ಎಂಬುದರ ಧ್ವನಿ ಮುದ್ರಿಕೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಇದಲ್ಲದೆ ನಾಡಗೀತೆಯ ಪೂರ್ಣ ಪಠ್ಯವನ್ನು ಯಾವ ರೀತಿ ಹಾಡಬಹುದು ಎಂಬ ಧ್ವನಿ ಮುದ್ರಿಕೆಯೂ http://kannadasiri.in ವೆಬ್‌ಸೈಟ್‌ನಲ್ಲಿದೆ.
ಈ ಬಗ್ಗೆ ಸಾರ್ವಜನಿಕರು ಇದೇ 31ರೊಳಗೆ kanbhavblr@gmail.com ವಿಳಾಸಕ್ಕೆ ಇ–ಮೇಲ್ ಮೂಲಕ ಅಭಿಪ್ರಾಯ ತಿಳಿಸಬೇಕು. ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ಧಾಟಿ ಅಧಿಕೃತ ಎಂಬುದನ್ನು ನಿರ್ಧರಿಸುವರು ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಸಂಕ್ಷಿಪ್ತಗೊಳಿಸಿದ ನಾಡಗೀತೆಯನ್ನು 90 ಸೆಕೆಂಡುಗಳಲ್ಲಿ, ನಾಡಗೀತೆಯ ಪೂರ್ಣ ಪಠ್ಯವನ್ನು 2 ನಿಮಿಷ 30 ಸೆಕೆಂಡುಗಳಲ್ಲಿ ಹಾಡಬಹುದು ಎಂದು ಅವರು ಹೇಳಿದರು. ಧ್ವನಿಮುದ್ರಿಕೆಯನ್ನು http://goo.gl/IzazRE ವಿಳಾಸದಲ್ಲೂ ಕೇಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.