ಶೃಂಗೇರಿ (ಚಿಕ್ಕಮಗಳೂರು ಜಿಲ್ಲೆ): ಇಲ್ಲಿಗೆ ಸಮೀಪದ ಮೆಣಸೆಯ ರಾಜೀವ್‌ಗಾಂಧಿ ಸಂಸ್ಕೃತ ವಿದ್ಯಾಪೀಠದಲ್ಲಿ ನಾಲ್ಕು ದಿನಗಳ ರಾಷ್ಟ್ರಮಟ್ಟದ 7ನೇ ಸಂಸ್ಕೃತ ಯುವ ಮಹೋತ್ಸವಕ್ಕೆ ಶನಿವಾರ ಅದ್ಧೂರಿ ಚಾಲನೆ ದೊರೆಯಿತು.
ವಿವಿಧ ರಾಜ್ಯಗಳ ಸಂಸ್ಕೃತಿ ಹಾಗೂ ಪಾರಂಪರಿಕ ವೇಷ ಭೂಷಣಗಳನ್ನು ಒಳಗೊಂಡ ಮನಮೋಹಕ ಶೋಭಾಯಾತ್ರೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕರ್ನಾಟಕ ಸಂಸ್ಕೃತ ವಿದ್ಯಾಲಯದ ಕುಲಪತಿ ಶ್ರೀನಿವಾಸ ವರ್ಕೇಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಕರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ನಮ್ಮ ದೇಶವು ಯುವ ಸಂಪನ್ಮೂಲದಿಂದ ಕೂಡಿದೆ. ಅದರ ಸಮರ್ಪಕ ಬಳಕೆ ಆಗಬೇಕಿದೆ ಎಂದರು.
ವಿಶ್ವ ಸಂಸ್ಕೃತ ಪ್ರತಿಷ್ಠಾನದ ಅಧ್ಯಕ್ಷ ಸುಬ್ರಮ್ಮಣ್ಯ ಜೋಯಿಸ್ ಮಾತನಾಡಿದರು. ಪ್ರಾಚಾರ್ಯ ಎನ್.ಆರ್.ಕಣ್ಣನ್, ಯುವ ಮಹೋತ್ಸವದ ಮುಖ್ಯ ಸಂಚಾಲಕ ಎ.ಪಿ.ಸಚ್ಚಿದಾನಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.