ADVERTISEMENT

ಸಂಸ್ಕೃತ ವಿವಿಗೆ 100 ಎಕರೆ ಉಚಿತ ಭೂಮಿ

ಎಸ್‌.ಸಂಪತ್‌
Published 28 ಅಕ್ಟೋಬರ್ 2013, 19:30 IST
Last Updated 28 ಅಕ್ಟೋಬರ್ 2013, 19:30 IST

ರಾಮನಗರ: ಮಾಗಡಿಯ ತಿಪ್ಪಸಂದ್ರ ದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ 100 ಎಕರೆ ಜಮೀನನ್ನು ಉಚಿತವಾಗಿ ಮಂಜೂರು ಮಾಡಿ ರಾಮನಗರ ಜಿಲ್ಲಾಧಿಕಾರಿ  ಆದೇಶ ಹೊರಡಿಸಿದ್ದಾರೆ.

ತಿಪ್ಪಸಂದ್ರ ಹೋಬಳಿಯ ಸರ್ವೆ ನಂ 40ರಲ್ಲಿ 242 ಎಕರೆ ಜಮೀನಿನ ಪೈಕಿ ಸಂಸ್ಕೃತ ವಿ.ವಿಗೆ 100 ಎಕರೆ ಮಂಜೂರು ಮಾಡಿದ್ದ ಹಿಂದಿನ ಜಿಲ್ಲಾಧಿ ಕಾರಿ ಯವರು,  ಮಾರ್ಗಸೂಚಿ ಬೆಲೆಯ ಶೇ 25ರಷ್ಟು ದರ ನಿಗದಿ ಪಡಿಸಿದ್ದರು. ಆದರೆ ಭೂಮಿಯನ್ನು ಉಚಿತವಾಗಿ ಮಂಜೂರು ಮಾಡುವಂತೆ  ಸಂಸ್ಕೃತ ವಿ.ವಿ ಆಡಳಿತ ವರ್ಗ ಕೋರಿಕೆ ಸಲ್ಲಿಸಿತ್ತು.
ಇದನ್ನು ಮಾನ್ಯ ಮಾಡಿರುವ ಈಗಿನ ಜಿಲ್ಲಾಧಿಕಾರಿಯವರು, ಕೆಲ ಷರತ್ತು ಗಳೊಂದಿಗೆ ಜಮೀನನ್ನು ಉಚಿತವಾಗಿ ನೀಡಿದ್ದಾರೆ.

ಹಸ್ತಾಂತರದ ನಂತರ ಶಂಕುಸ್ಥಾಪನೆ: ಮಂಜೂರಾತಿ ಆದೇಶ ಹೊರಬಿದ್ದಿದೆ. ಜಿಲ್ಲಾಡಳಿತ ಜಮೀನನ್ನು ವಿಶ್ವವಿದ್ಯಾ ಲಯಕ್ಕೆ ಹಸ್ತಾಂತರ ಮಾಡಿದ ನಂತರ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಶಂಕು ಸ್ಥಾಪನೆ ನೆರವೇರಿಸುವುದಾಗಿ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್‌  ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಶ್ವವಿದ್ಯಾಲಯದಲ್ಲಿ ಭಾಷಾ, ಶಾಸ್ತ್ರ, ವೇದಾಂತ ವಿಭಾಗಗಳಿದ್ದು, ಅವುಗಳಿಗೆ ಪೂರಕವಾಗಿ ಕಟ್ಟಡಗಳ ನಿರ್ಮಾಣ ಆಗಲಿದೆ. ವಿ.ವಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಗಳ ಬೋಧನೆ ಮತ್ತು ಸಂಶೋಧನಾ ಚಟುವಟಿಕೆ  ನಿರಂತರವಾಗಿ ನಡೆಯಲಿದ್ದು, ಬೋಧಕರ ನೇಮಕಾತಿ ಹಂತ ಹಂತದಲ್ಲಿ ನಡೆಯುತ್ತಿದೆ’ ಎಂದು ಹೇಳಿದರು.

‘ಪ್ರಸ್ತುತ ವಿ.ವಿ ವ್ಯಾಪಿ್ತಯಲ್ಲಿ 30 ಕಾಲೇಜುಗಳು ನಡೆಯುತ್ತಿದ್ದು, ಸಾವಿ ರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿ.ವಿ ಆವರಣ ನಿರ್ಮಾಣವಾದ ನಂತರ ವಿ.ವಿ ಚಟುವ ಟಿಕೆಗಳನ್ನು ವಿಸ್ತರಿಸಿಕೊಳ್ಳಲು ಸಹಕಾರಿ ಯಾಗುತ್ತದೆ’ ಎಂದು ಅವರು ಹೇಳಿದರು.

ಇನ್ನೂ ಬಾರದ ಆರೋಗ್ಯ ವಿ.ವಿ
ರಾಮನಗರದ ಅರ್ಚಕರ ಹಳ್ಳಿಯಲ್ಲಿ ಉದ್ದೇಶಿತ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಸ್ಥಾಪನೆ ಕಾರ್ಯ ನನೆಗುದಿಗೆ ಬಿದ್ದಿದೆ.

ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ವಿ.ವಿ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಹೆಚ್ಚಿನ ಪರಿಹಾರ ಕೋರಿ ಹಲವು ಭೂಮಾಲೀಕರು ಸುಪ್ರೀಂ ಕೋರ್ಟ್‌ಗೆ ಹೋಗಿರುವ ಕಾರಣ ವಿ.ವಿ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.