ಬೆಂಗಳೂರು: ‘ಜನವರಿ 31ರಿಂದ ಫೆಬ್ರುವರಿ 3ರವರೆಗೆ ಶ್ರವಣಬೆ ಳಗೊಳದಲ್ಲಿ ನಡೆಯುವ 8ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಸಮ್ಮೇಳನ ಆವರಣದಿಂದ ಹೊರಗೆ ಒಒಡಿ ಪ್ರಮಾಣಪತ್ರ ನೀಡುವ ವ್ಯವಸ್ಥೆಯನ್ನು ಮಾಡಲಾ ಗುವುದು’ ಎಂದು ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು.
ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರತಿ ವರ್ಷ ಒಒಡಿ ಪಡೆಯುವಲ್ಲಿ ಆಗುತ್ತಿರುವ ಗೊಂದಲ ನಿವಾರಣೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ಈ ಬಾರಿ ಗೀತಗಾಯನದಲ್ಲಿ ಡಾ. ಸಿದ್ದಲಿಂಗಯ್ಯ ಅವರ ಕವಿತೆಗಳನ್ನು ಮಾತ್ರ ಹಾಡಲಾ ಗುವುದು.
ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಅವರ ತಂಡದವರು ಗೀತ ಗಾಯನ ಪ್ರಸ್ತುತ ಪಡಿಸಲಿದ್ದಾರೆ. ‘ಆಧುನಿಕ ಕನ್ನಡ ಚರಿತ್ರೆ’ ಎಂಬ ಏಳುನೂರು ಪುಟಗಳ ಗ್ರಂಥ ಸೇರಿದಂತೆ ಕಸಾಪದ ಪ್ರಕಟಣೆಯ ಪುಸ್ತಕ ಗಳು ಸಮ್ಮೇಳನದಲ್ಲಿ ಬಿಡುಗಡೆ ಯಾಗಲಿದೆ ಎಂದು ಮಾಹಿತಿ ನೀಡಿದರು.
‘ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ’ ಸಮ್ಮೇಳನದ ಏಕ ನಿರ್ಣಯವಾಗಿದೆ. ಬಹುತೇಕ ಗೊಷ್ಠಿಗಳು ಈ ವಿಚಾರದ ಸುತ್ತಲೇ ಇದೆ. ಹಾಗಾಗಿ ಶ್ರವಣಬೆಳಗೊಳದ ಸಮ್ಮೇಳನ ಗೋಕಾಕ್ ಮಾದ ರಿಯ ಹೋರಾಟಕ್ಕೆ ನಾಂದಿಯಾಗಲಿದೆ ಎಂದು ಅವರು ಹೇಳಿದರು.
ಖಾಲಿ ತಟ್ಟೆ ಮಾತ್ರ ತೋರಿಸಬೇಡಿ
‘ಸಾವಿರಾರು ಜನ ಸೇರುವಲ್ಲಿ ಗೊಂದಲ ಸೃಷ್ಟಿ ಯಾಗುವುದು ಸಹಜ. ಆದರೆ, ದೃಶ್ಯ ಮಾಧ್ಯಮ ದವರು ಊಟದ ಜಾಗದಲ್ಲಿ ಖಾಲಿ ತಟ್ಟೆಗಳನ್ನು ಎಸೆಯುವ ದೃಶ್ಯಗಳನ್ನು ಮಾತ್ರ ತೋರಿಸುವುದು, ಬರೇ ಸಮಸ್ಯೆಗಳನ್ನೇ ಬೆಟ್ಟು ಮಾಡಿ ತೋರಿಸು ವುದು ಬಿಟ್ಟು ಉತ್ತಮ ವ್ಯವಸ್ಥೆಯನ್ನೂ ಜನರಿಗೆ ತಲುಪಿಸಿ, ಸಹಕರಿಸಿ’ ಎಂದು ಮನವಿ ಮಾಡಿದರು.
ಬಜ್ಜಿ, ಬೋಂಡಕ್ಕೆ ಅವಕಾಶವಿಲ್ಲ
ಸಮ್ಮೇಳನಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನ ಬರುವ ನಿರೀಕ್ಷೆ ಇದ್ದು, ಪುಸ್ತಕ ಮಳಿಗೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗುತ್ತಿದೆ. ಮಳಿಗೆಗಳ ಸುತ್ತಮುತ್ತ ಬಜ್ಜಿ, ಬೋಂಡ, ಚುರುಮುರಿ ಮುಂತಾದ ತಿನಿಸುಗಳ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಸಂಘಟಕರಿಗೆ ಸೂಚಿ ಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.