ಬೆಂಗಳೂರು: ಅತಿ ಹೆಚ್ಚು ಸ್ಥಾನ ಪಡೆದ ಬಿಜೆಪಿ, ಜೆಡಿಎಸ್‌ಗೆ ಸಂಪೂರ್ಣ ಬೆಂಬಲ ಘೋಷಿಸಿದ ಕಾಂಗ್ರೆಸ್ ಪಕ್ಷಗಳ ಶಾಸಕರು ಸರ್ಕಾರ ರಚನೆಗಾಗಿ ನಡೆಸುತ್ತಿರುವ ಕಸರತ್ತು ಇನ್ನೂ ಮುಂದುವರಿದಿದೆ. 2018ರ ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ, ಬುಧವಾರ(ಮೇ 16) ಹಾಗೂ ಗುರುವಾರ ರಾಜಕೀಯ ವಲಯದಲ್ಲಿ ನಡೆದ ಪ್ರಮುಖ ಬೆಳವಣಿಗೆಗಳ ಪಟ್ಟಿ ಇಲ್ಲಿದೆ.
2018, ಮೇ 16(ಬುಧವಾರ)
* ಸಂಜೆ 5:00– ರಾಜಭವನಕ್ಕೆ ಎಚ್.ಡಿ.ಕುಮಾರಸ್ವಾಮಿ ಪ್ರವೇಶಕ್ಕೆ ಸಿಗದ ಅನುಮತಿ. ಜೆಡಿಎಸ್ ಬೆಂಬಲಿಗರ ಪ್ರತಿಭಟನೆ
* ಸಂಜೆ 5:20– ರಾಜಭವನದಲ್ಲಿ ರಾಜ್ಯಪಾಲರಿಗೆ ಕಾಂಗ್ರೆಸ್–ಜೆಡಿಎಸ್ ಶಾಸಕರ ಸಹಿ ಒಳಗೊಂಡ ಪಟ್ಟಿ ಸಲ್ಲಿಕೆ. ಸರ್ಕಾರ ರಚಿಸಲು ಅವಕಾಶ ಕೋರಿ ಮನವಿ. ಸಾಂವಿಧಾನಿಕವಾಗಿ ತೀರ್ಮಾನ ಕೈಗೊಳ್ಳುವುದಾಗಿ ರಾಜ್ಯಪಾಲರ ಭರವಸೆ.
* ಸಂಜೆ 6:00– ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕರ ಸಭೆ
* ಸಂಜೆ 7:30– ಬಿಡದಿ ಸಮೀಪದ ಈಗಲ್‌ಟನ್ ರೆಸಾರ್ಟ್‌ಗೆ ಬಸ್‌ನಲ್ಲಿ ಕಾಂಗ್ರೆಸ್ ಶಾಸಕರ ಪ್ರಯಾಣ
* ರಾತ್ರಿ 8:00– ಯಡಿಯೂರಪ್ಪ ಗುರುವಾರ 9:30ಕ್ಕೆ ಪ್ರಮಾಣ ವಚನ ಸ್ವೀಕಾರ: ಬಿಜೆಪಿ ಮುಖಂಡ ಸುರೇಶ್ ಕುಮಾರ್ ಹಾಗೂ ಬಿಜೆಪಿ ಕರ್ನಾಟಕ ಟ್ವೀಟ್
* ಕಾಂಗ್ರೆಸ್‌ನಿಂದ ಫೋನ್ ಟ್ಯಾಪ್: ಶೋಭಾ ಕರಂದ್ಲಾಜೆ ಸೇರಿ ಬಿಜೆಪಿಯ ಮೂವರು ಸಚಿವರಿಂದ ಕೇಂದ್ರ ಗೃಹ ಸಚಿವರಿಗೆ ಪತ್ರ
* ರಾತ್ರಿ 8:30– ಫೋನ್ ಟ್ಯಾಪ್, ಐಟಿ ದಾಳಿ, ಕುದುರೆ ವ್ಯಾಪರದ ವಿಚಾರವಾಗಿ ಬಿಜೆಪಿ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ
* ರಾತ್ರಿ 8:45– ರೆಸಾರ್ಟ್ ತಲುಪಿದ ಶಾಸಕರು
* ರಾತ್ರಿ 9:00– ಗುರುವಾರ ಯಡಿಯೂರಪ್ಪ ಪ್ರಮಾಣ ವಚನ; ರಾಜ್ಯಪಾಲರಿಂದ ಅಧಿಕೃತ ಪತ್ರ
* ಬಿಜೆಪಿ ಮುಖಂಡರಿಂದ ಸುದ್ದಿ ಗೋಷ್ಠಿ
* ಮಧ್ಯರಾತ್ರಿ 1:45- ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನಕ್ಕೆ ತಡೆ ಕೋರಿ ಕಾಂಗ್ರೆಸ್ ಮತ್ತು ಜೆಡಿಎಸ್ ಅರ್ಜಿ. ಮಧ್ಯರಾತ್ರಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್
2018, ಮೇ 17(ಗುರುವಾರ)
* ಬೆಳಗಿನ ಜಾವ 4:30– ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್. ರಾಜ್ಯಪಾಲರ ಆದೇಶಕ್ಕೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್.
* ಬೆಳಿಗ್ಗೆ 9:00– ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ
* ಬೆಳಿಗ್ಗೆ 10:00– ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಂದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ. ಎಚ್.ಡಿ.ದೇವೇಗೌಡ, ಗುಲಾಬ್ ನಬಿ ಆಜಾದ್ ಸೇರಿ ಅನೇಕ ಮುಖಂಡರು ಭಾಗಿ.
* ಬೆಳಿಗ್ಗೆ 11:00– ಸುದ್ದಿಗೋಷ್ಠಿ: ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿರುವಂತೆ ರಾಷ್ಟ್ರೀಕೃತ ಬ್ಯಾಂಕ್, ನೇಕಾರರ ಸಂಘ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ₹1 ಲಕ್ಷದವರೆಗಿನ ಬೆಳೆ ಸಾಲ ಮನ್ನಾ ಶೀಘ್ರ ಘೋಷಣೆ ಮಾಡುವ ಭರವಸೆ
* ಮಧ್ಯಾಹ್ನ: ರೆಸಾರ್ಟ್ ಮತ್ತು ಹೋಟೆಲ್‌ಗೆ ಕಾಂಗ್ರೆಸ್–ಜೆಡಿಎಸ್ ಶಾಸಕರು ವಾಪಸ್
* ಬಹುಮತವಿಲ್ಲದಿದ್ದರೂ ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲ ಅವರ ಕ್ರಮ ಪ್ರಶ್ನಿಸಿ ಹಿರಿಯ ವಕೀಲ ರಾಂ ಜೇಠ್ಮಲಾನಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ
* ಬಿಜೆಪಿ ಪಕ್ಷದ ಕಚೇರಿಯಲ್ಲಿ ನೂತನ ಮುಖ್ಯಮಂತ್ರಿ ಬಿಎಸ್‌ವೈ ಸಭೆ: ಸೋತ ಅಭ್ಯರ್ಥಿಗಳಿಗೆ ಅಭಯ, ಕಾಂಗ್ರೆಸ್–ಜೆಡಿಎಸ್ ವಿರುದ್ಧ ವಾಗ್ದಾಳಿ
* ಗೋವಾ, ಬಿಹಾರ, ಮೇಘಾಲಯ ಹಾಗೂ ಮಣಿಪುರ ರಾಜ್ಯಗಳ ಅತಿ ದೊಡ್ಡ ಪಕ್ಷಗಳು ಸರ್ಕಾರ ರಚನೆಗೆ ಅವಕಾಶ ಕೋರಲು ರಾಜ್ಯಪಾಲರ ಭೇಟಿಗಾಗಿ ಸಮಯ ನಿಗದಿ. ಕರ್ನಾಟಕದಲ್ಲಿ ಬಿಜೆಪಿಯಿಂದ ಪ್ರಜಾಪ್ರಭುತ್ವ ಕಗ್ಗೊಲೆ ವಿರೋಧಿಸಿ ವಾಗ್ದಾಳಿ.
* ಕಾಂಗ್ರೆಸ್ ಮುಖಂಡರ ಸಂಪರ್ಕಕ್ಕೆ ಸಿಗದ ಆನಂದ್ ಸಿಂಗ್
* ಸಂಜೆ 4:30– ಕಾಂಗ್ರೆಸ್ ಶಾಸಕರು ಬಿಡಾರ ಹೂಡಿದ್ದ ಈಗಲ್‌ಟನ್ ರೆಸಾರ್ಟ್‌ಗೆ ನೀಡಿದ್ದ ಭದ್ರತೆ ವಾಪಸ್
* ಸಂಜೆ 4:30– ತುಮಕೂರಿನ ಸಿದ್ಧಗಂಗಾ ಮಠಕ್ಕೆ ಸಿಎಂ ಯಡಿಯೂರಪ್ಪ ಭೇಟಿ. ಡಾ.ಶಿವಕುಮಾರ ಸ್ವಾಮೀಜಿ ಆಶೀರ್ವಾದ ಪಡೆದ ನಾಯಕರು.
* ಅಧಿಕಾರದ ಚುಕ್ಕಾಣಿ ಹಿಡಿದ ಮೊದಲ ದಿನವೇ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಬಿಜೆಪಿ ಸರ್ಕಾರದ ಆದೇಶ. ರಾಮನಗರ ಎಸ್‌ಪಿ ಆಗಿ ಚಿಕ್ಕಮಗಳೂರು ಎಸ್‌ಪಿ ಅಣ್ಣಾಮಲೈ ವರ್ಗಾವಣೆ.
* ಸಂಜೆ 7:00– ಬಿಜೆಪಿಯ ಕುದುರೆ ವ್ಯಾಪಾರ ತಂತ್ರಕ್ಕೆ ಒಳಗಾಗುವುದನ್ನು ತಪ್ಪಿಸಲು ಜೆಡಿಎಸ್–ಕಾಂಗ್ರೆಸ್ ಶಾಸಕರು ರಾತ್ರಿಯೇ ಕೊಚ್ಚಿಗೆ ತೆರಳಲು ಸಿದ್ಧತೆ. ಎಚ್‌ಎಎಎಲ್‌ನಿಂದ ವಿಶೇಷ ವಿಮಾನದಲ್ಲಿ ಪ್ರಯಾಣ.
2018 ಮೇ, 18– ಬೆಳಿಗ್ಗೆ 10:30 (ನಿಗದಿ)
ಶಾಸಕರ ಬೆಂಬಲ ದಾಖಲೆಗಳು ಸೇರಿ, ಸರ್ಕಾರ ರಚನೆಗೆ ಸಲ್ಲಿಸಲಾದ ಮನವಿ ಹಾಗೂ ತೆಗೆದುಕೊಂಡ ಕ್ರಮದ ದಾಖಲೆಗಳನ್ನು ಉನ್ನತ ಮಟ್ಟದ ಕಾನೂನು ಅಧಿಕಾರಿಗಳು ರಾಜ್ಯಪಾಲರಿಂದ ಪಡೆಯದು, ಬೆಳಿಗ್ಗೆ 10:30ಕ್ಕೆ ಕೋರ್ಟ್‌ಗೆ ಸಲ್ಲಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.