ADVERTISEMENT

ಹಿರಿಯ ಬಂಡಾಯ ಸಾಹಿತಿ ಜಂಬಣ್ಣ ಅಮರಚಿಂತ ನಿಧನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 6:16 IST
Last Updated 14 ಫೆಬ್ರುವರಿ 2017, 6:16 IST
ಹಿರಿಯ ಬಂಡಾಯ ಸಾಹಿತಿ ಜಂಬಣ್ಣ ಅಮರಚಿಂತ ನಿಧನ
ಹಿರಿಯ ಬಂಡಾಯ ಸಾಹಿತಿ ಜಂಬಣ್ಣ ಅಮರಚಿಂತ ನಿಧನ   

ರಾಯಚೂರು:  ಹಿರಿಯ ಬ೦ಡಾಯ ಸಾಹಿತಿ ಜಂಬಣ್ಣ ಅಮರಚಿಂತ ಮಂಗಳವಾರ ಬೆಳಗ್ಗೆ  ನಿಧನರಾಗಿದ್ದಾರೆ.

ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಜಂಬಣ್ಣ ಅಮರಚಿಂತ ಅವರಿಗೆ 73 ವರ್ಷ ವಯಸ್ಸಾಗಿತ್ತು.

ರಾಜ್ಯೋತ್ಸವ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಜಂಬಣ್ಣ ಅಮರಚಿಂತ ಪುರಸ್ಕೃತರಾಗಿದ್ದರು.

ADVERTISEMENT

ಬ೦ಡಾಯ, ಗಝಲ್, ರುಬಾಯಿ ಕವಿಯಾಗಿ ಅಮರಚಿ೦ತ ಕಾವ್ಯಾನಾಮದಿ೦ದ ಹೆಸರುವಾಸಿಯಾಗಿದ್ದರು.

ಮು೦ಜಾವಿನ ಕೊರಳು, ಮಣ್ಣು ಸೇರಿದ ಬೀಜ ಎಂಬ ಕವನ ಸಂಕಲನಗಳು, ಕುರುಬಯ್ಯ ಮತ್ತು ಅ೦ಕುಶದೊಡ್ಡಿ ಕಾದ೦ಬದಿ ಮೂಲಕ ಜಂಬಣ್ಣ ಅಮರಚಿಂತ ಜನಪ್ರಿಯರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.