ಮೈಸೂರು: ‘ವೇದಕಾಲದಲ್ಲಿ ಜಾತಿ ಪದ್ಧತಿ ಇರಲಿಲ್ಲ. ಕಸುಬಿಗೆ ಅನುಗುಣವಾಗಿ ಜಾತಿಗಳು ಹುಟ್ಟಿಕೊಂಡವು. ಇದೀಗ ಜನರು ಕೂಡ ವೃತ್ತಿಯನ್ನು ಬದಲಾಯಿಸಿದ್ದಾರೆ. ಹಾಗಾಗಿ, ನಗರ ಪ್ರದೇಶದಲ್ಲಿ ಅಂತರ್ಜಾತಿ ವಿವಾಹವೂ ಹೆಚ್ಚುತ್ತಿದೆ. ನಮಗೆ ಕಷ್ಟವಾ-ದರೂ ಅದನ್ನು ಒಪ್ಪಿಕೊಳ್ಳಲೇಬೇಕು’ ಎಂದು ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಹೇಳಿದರು.
ನಗರದ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಮೈಸೂರಿನ ವೇದಶಾಸ್ತ್ರ ಪೋಷಿಣಿ ಸಭಾ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ವಾಂಸರನ್ನು ಸನ್ಮಾನಿಸಿ ಅವರು ಮಾತನಾಡಿದರು.
‘ನಮ್ಮ ವಿದ್ವಾಂಸರು ವೇದ, ಉಪನಿಷತ್ತು ಅಧ್ಯಯನ ಮಾಡಿದರೆ ಸಾಲದು. ಬೇರೆ ಧರ್ಮಗಳ ಧರ್ಮಗ್ರಂಥವನ್ನೂ ಅಧ್ಯಯನ ಮಾಡಿ, ಅಲ್ಲಿರುವ ಸತ್ವವನ್ನು ಅರ್ಥೈಸಬೇಕು. ಆಗ ನಮ್ಮ ಧರ್ಮದ ಶಕ್ತಿ ಏನೆಂಬುದು ತಿಳಿಯುತ್ತದೆ. ನಮ್ಮ ಹಿಂದೂ ಧರ್ಮದಲ್ಲಿ ಬೇರೆ ಧರ್ಮ, ಸಂಸ್ಕೃತಿಯನ್ನು ಗೌರವದಿಂದ ಕಾಣುತ್ತೇವೆ. ಆದರೆ, ಬೇರೆ ಧರ್ಮದವರು ಆ ರೀತಿ ಆಲೋಚನೆ ಮಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.