ಉಡುಪಿ: ‘ಭಾರತದ ಸಾಂಪ್ರದಾಯಿಕ ಭಾಷೆಗಳಲ್ಲದೆ, ಅರೇಬಿಕ್, ಪರ್ಷಿಯನ್ ಮೊದಲಾದ ಭಾಷೆಗಳಲ್ಲಿರುವ ವಿಶಿಷ್ಟ ಧ್ವನಿಗಳನ್ನೂ ಲಿಪ್ಯಂತರಗೊಳಿಸಲು ಸಾಧ್ಯವಿರುವಂತಹ ‘ಅಪಾರ’ ಎಂಬ ಹೊಸ ಲಿಪಿಗುಚ್ಛವನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದು ವಿಜ್ಞಾನಿ ಕೆ.ಪಿ. ರಾವ್ ಹೇಳಿದರು.
ತಾವೇ ವಿನ್ಯಾಸ ಮಾಡಿದ ‘ಅಪಾರ’ ಎಂಬ ಇಂಗ್ಲಿಷ್ ಅಕ್ಷರಳ್ಳ ಯೂನಿಕೋಡ್ ಲಿಪಿಗುಚ್ಛವನ್ನು ಮಣಿಪಾಲ ಸ್ಕೂಲ್ ಆಫ್ ಕಮ್ಯೂನಿಕೇಷನ್ನಲ್ಲಿ ಬುಧವಾರ ಲೋಕಾರ್ಪಣೆ ಮಾಡಿ ಮಾತನಾಡಿದರು.
ರೋಮನ್ ಲಿಪಿಯನ್ನು ಇನ್ನಷ್ಟು ಪರಿಷ್ಕರಿಸಿ, ಈ ಲಿಪಿಗುಚ್ಛವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಲಿಪಿ ತಂತ್ರಾಂಶದ ವಿಶೇಷತೆಯೆಂದರೆ ಒಂದು ಲಿಪಿಯಲ್ಲಿ ಬರೆದ ಶಬ್ದವನ್ನು ಯಾವುದೇ ತೊಡಕಿಲ್ಲದೆ ಇನ್ನೊಂದು ಲಿಪಿಯಲ್ಲಿ ಓದಬಹುದು. ಲಿಪಿಕಾರನ ಅವಶ್ಯಕತೆಗಳಿಗೆ ಅನುಗುಣವಾಗಿ ಹಾಗೂ ಅಂತರ್ಜಾಲಗಳಲ್ಲಿಯೂ ಸಹ ಈ ತಂತ್ರಾಂಶವನ್ನು ಬಳಕೆ ಮಾಡಬಹುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.