ADVERTISEMENT

ಬೈಕ್ ಸವಾರನಿಗೆ ₹ 18 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 19:43 IST
Last Updated 14 ಸೆಪ್ಟೆಂಬರ್ 2019, 19:43 IST
ಮದ್ದೂರಿನಲ್ಲಿ ಬೈಕ್ ಸವಾರನಿಗೆ ₹18 ಸಾವಿರ ದಂಡ ವಿಧಿಸಿರುವ ರಶೀದಿ
ಮದ್ದೂರಿನಲ್ಲಿ ಬೈಕ್ ಸವಾರನಿಗೆ ₹18 ಸಾವಿರ ದಂಡ ವಿಧಿಸಿರುವ ರಶೀದಿ   

ಮದ್ದೂರು: ವ್ಯಕ್ತಿಯೊಬ್ಬರು ಕುಡಿದು ಬೈಕ್‌ ಚಾಲನೆ ಮಾಡಿದ್ದಕ್ಕೆ ಹಾಗೂ ಯಾವುದೇ ದಾಖಲಾತಿ ಇಟ್ಟುಕೊಳ್ಳದ್ದಕ್ಕೆ ತಾಲ್ಲೂಕು ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶರು ₹ 18 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸಂಚಾರ ಠಾಣೆ ಪೊಲೀಸರು ಸೆ. 12ರಂದು ಪಟ್ಟಣದ ಟಿ.ಬಿ ವೃತ್ತದಲ್ಲಿ ಕೆ.ಶೇಖರ್ ಎಂಬುವರನ್ನು ತಪಾಸಣೆಗೆ ಒಳಪಡಿಸಿದಾಗ ಅವರು ಕುಡಿದು ಬೈಕ್‌ ಚಾಲನೆ ಮಾಡಿರುವುದು ಗೊತ್ತಾಯಿತು. ಡಿ.ಎಲ್‌ ಸೇರಿ ಯಾವುದೇ ದಾಖಲಾತಿ ಇಲ್ಲದ ಕಾರಣ ಬೈಕ್‌ ಜಪ್ತಿ ಮಾಡಿ ಎಫ್‌ಐಆರ್‌ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಬಾಲಸುಬ್ರಮಣ್ಯ ಅವರು, ಶೇಖರ್ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದಕ್ಕೆ ₹ 10 ಸಾವಿರ, ವಿಮೆ ಇಲ್ಲದಿದ್ದಕ್ಕೆ ₹ 2 ಸಾವಿರ, ಡಿ.ಎಲ್‌ ಇಲ್ಲದಿದ್ದಕ್ಕೆ ₹ 5 ಸಾವಿರ ಹಾಗೂ ಹೆಲ್ಮೆಟ್‌ ರಹಿತ ಚಾಲನೆಗೆ ₹ 1 ಸಾವಿರ ಸೇರಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.