ಬೆಂಗಳೂರು: ನೆರೆ ಹಾವಳಿಯಿಂದ ಹಾನಿಗೊಳಗಾದವಿದ್ಯುತ್ ಮಗ್ಗಗಳಂತೆ ಕೈಮಗ್ಗ ಘಟಕಗಳಿಗೂ ತಲಾ ₹ 25 ಸಾವಿರ ಪರಿಹಾರ ನೀಡಲು ಸರ್ಕಾರ ಒಪ್ಪಿಕೊಂಡಿದೆ.
ವಿಧಾನ ಪರಿಷತ್‌ನಲ್ಲಿ ನಡೆದ ಸುದೀರ್ಘ ಚರ್ಚೆಯ ಕೊನೆಯಲ್ಲಿ ಶನಿವಾರ ಕಂದಾಯ ಸಚಿವ ಆರ್. ಅಶೋಕ ಸರ್ಕಾರದ ಪರವಾಗಿ ಉತ್ತರ ನೀಡಿದರು. ಆದರೆ ಕೈಮಗ್ಗ ಘಟಕ ನಾಶವಾದರೆ ಪರಿಹಾರ ನೀಡುವ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಎಸ್. ಆರ್. ಪಾಟೀಲ ಅವರು, ಸರ್ಕಾರ ತಕ್ಷಣ ತನ್ನ ನಿಲುವನ್ನು ತಿಳಿಸಬೇಕು ಎಂದರು.
ಸದನದಲ್ಲೇ ಇದ್ದ ಮುಖ್ಯಮಂತ್ತಿ ಬಿ. ಎಸ್. ಯಡಿಯೂರಪ್ಪ ಅವರೊಂದಿಗೆ ಸಮಾಲೋಚನೆ ನಡೆಸಿದ ಅಶೋಕ, ಕೈಮಗ್ಗ ಘಟಕಗಳಿಗೂ ಪರಿಹಾರ ನೀಡುವುದಕ್ಕೆ ಮುಖ್ಯಮಂತ್ರಿ ಸಮ್ಮತಿಸಿದ್ದಾರೆ ಎಂದು ಪ್ರಕಟಿಸಿದರು.
ಮೆಚ್ಚುಗೆ: ಸರ್ಕಾರದ ನೆರೆ ಪರಿಹಾರ ಕಾರ್ಯಗಳನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ಬಹುತೇಕ ಮೆಚ್ಚಿಕೊಂಡರು. ನೇರವಾಗಿ ಖಾತೆಗೆ ಹಣ ಜಮಾ ಮಾಡುವ ಸರ್ಕಾರದಕ್ರಮವನ್ನು ಕೊಂಡಾಡಿದರು. ಎನ್‌ಡಿಆರ್‌ಎಫ್ ನಿಯಮ ಮೀರಿ ಬೆಳೆ ಪರಿಹಾರ ಹೆಚ್ಚಿಸಿರುವ ಕ್ರಮವನ್ನೂ ಸ್ವಾಗತಿಸಿದರು. ಆದರೆ ಪ್ರಮುಖ ಮೂರು ಬೇಡಿಕೆಗಳನ್ನು ಈಡೇರಿಸಲು ಸರ್ಕಾರನಿರಾಕರಿಸಿದ್ದರಿಂದ ಕಾಂಗ್ರೆಸ್ ಕೊನೆಯಲ್ಲಿ ಧರಣಿ ನಡೆಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.