ADVERTISEMENT

ರೈಲ್ವೆ | IRCTCಯಿಂದ 10 ದಿನಗಳ ಉತ್ತರಾಖಂಡ ಯಾತ್ರೆ: ಪ್ಯಾಕೆಜ್‌ ವಿವರ ಇಲ್ಲಿದೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 15:31 IST
Last Updated 14 ಆಗಸ್ಟ್ 2024, 15:31 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ಆ. 22ರಿಂದ ಸೆಪ್ಟೆಂಬರ್‌ 1ರವರೆಗೆ ‘ದೇವ ಭೂಮಿ ಉತ್ತರಾಖಂಡ ಯಾತ್ರೆ ಭಾರತ್ ಗೌರವ್ ಮಾನಸ್‌ಖಂಡ್‌ ಎಕ್ಸ್‌ಪ್ರೆಸ್‌’ ಆರಂಭಗೊಳ್ಳಲಿದೆ ಎಂದು ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೋರೇಶನ್ ಲಿಮಿಟೆಡ್‌ (ಐಆರ್‌ಸಿಟಿಸಿ) ತಿಳಿಸಿದೆ. 

ಬೆಂಗಳೂರಿನಿಂದ ಆರಂಭವಾಗುವ ಯಾತ್ರೆಯು ಒಟ್ಟು 10 ದಿನಗಳ ಪ್ರವಾಸದಲ್ಲಿ ಉತ್ತರಾಖಂಡದ ಪ್ರವಾಸಿ ತಾಣಗಳಾದ ಭೀಮತಾಲ್, ನೈನಿತಾಲ್, ಕೈಂಚಿ ಧಾಮ್, ಬಾಬಾ ನೀಮ್ ಕರೋಲಿ ದೇವಸ್ಥಾನ, ಕಸರ್ ದೇವಿ ದೇವಸ್ಥಾನ, ಕತರ್ಮಲ್ ಸೂರ್ಯ ದೇವಾಲಯ, ಜಾಗೇಶ್ವರ ಧಾಮ್, ಗೋಲು ದೇವತಾ, ಚಿಟೈ, ಅಲ್ಮೋರ, ನಂದಾ ದೇವಿ ದೇವಸ್ಥಾನ, ಬೈಜಿನಾಥ್, ಬಾಗೇಶ್ವರ, ಕೌಸನಿ, ರಾಣಿಖೇತ್‌ಗಳಿಗೆ ಭೇಟಿ ನೀಡಬಹುದು ಎಂದು ಐಆರ್‌ಸಿಟಿಸಿ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಜಿತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಪ್ರವಾಸದ ಪ್ಯಾಕೇಜ್‌ ದರವು ಒಬ್ಬರಿಗೆ ಸ್ಟ್ಯಾಂಡರ್ಸ್‌ನಲ್ಲಿ ₹28,020 ಹಾಗೂ ಕಂಫರ್ಟ್‌ ವರ್ಗದಲ್ಲಿ ₹35,340 ಇದೆ. ಮಾಹಿತಿಯನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ವಿವರಗಳಿಗೆ ಮೊಬೈಲ್‌: 9003140710/ 8595931292 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.