ADVERTISEMENT

ರಾಜ್ಯಕ್ಕೆ ಒಂದೇ ತುರ್ತು ಕರೆ 112

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 19:29 IST
Last Updated 31 ಅಕ್ಟೋಬರ್ 2019, 19:29 IST
102 ತುರ್ತು ಸ್ಪಂದನಾ ಸಹಾಯವಾಣಿ ಕೇಂದ್ರದ ನೋಟ ಪ್ರಜಾವಾಣಿ ಚಿತ್ರ
102 ತುರ್ತು ಸ್ಪಂದನಾ ಸಹಾಯವಾಣಿ ಕೇಂದ್ರದ ನೋಟ ಪ್ರಜಾವಾಣಿ ಚಿತ್ರ   

ಬೆಂಗಳೂರು: ಒಂದೇ ದೂರವಾಣಿ ಸಂಖ್ಯೆ ‘112’ ಡಯಲ್ ಮಾಡುವ ಮೂಲಕ ಪೊಲೀಸ್‌ (100), ಅಗ್ನಿ
ಶಾಮಕ ದಳ (101), ಆರೋಗ್ಯ (108) ಮತ್ತಿತರ ತುರ್ತುಸೇವೆಗಳನ್ನು ಪಡೆಯಬಹುದು.

ಈ ಏಕೀಕೃತ ತುರ್ತು ಸ್ಪಂದನಾ ಸಹಾಯ ವ್ಯವಸ್ಥೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಇಲ್ಲಿ ಚಾಲನೆ ನೀಡಿದರು.

‘ಒಂದು ಭಾರತ; ಒಂದು ತುರ್ತು ಕರೆ ಸಂಖ್ಯೆ’ ಪರಿಕಲ್ಪನೆಯಡಿ ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದೆ. 112 ಸಹಾಯವಾಣಿ (ಇ.ಆರ್‌.ಸಿ) ಕರೆ ಮಾಡಿದರೆ ನೇರವಾಗಿ ಜಿಲ್ಲಾ ಸಮನ್ವಯ ಕೇಂದ್ರದೊಂದಿಗೆ ಸಂಪರ್ಕಿಸಲಾಗುತ್ತದೆ. ಆ ಮೂಲಕ, ಅಗತ್ಯ ಇರುವವರಿಗೆ ನೆರವು ಒದಗಿಸಲಾಗುತ್ತದೆ.

ADVERTISEMENT

ಸ್ಮಾರ್ಟ್ ಫೋನ್‌ನಲ್ಲಿ 112 ನಂಬರ್ ಡಯಲ್ ಮಾಡಬಹುದು ಅಥವಾ ಪವರ್ ಬಟನ್ ಮೂರು ಬಾರಿ ಒತ್ತಿ ತಕ್ಷಣವೇ ಇ.ಆರ್.ಸಿ. ಕರೆಯನ್ನು ಸಕ್ರಿಯಗೊಳಿಸಬಹುದು. ಸಾಮಾನ್ಯ ಫೋನ್‍ಗಳಲ್ಲಿ 5 ಅಥವಾ 9 ಸಂಖ್ಯೆಯನ್ನು ದೀರ್ಘವಾಗಿ ಒತ್ತಿದರೆ ಇ.ಆರ್.ಸಿ. ಕರೆ ಸಕ್ರಿಯಗೊಳಿಸಬಹುದು. ಸಂಬಂಧಪಟ್ಟ ರಾಜ್ಯಗಳ ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ (ಇ.ಆರ್‌.ಎಸ್‍.ಎಸ್) ವೆಬ್‍ಸೈಟ್‍ಗೆ ಭೇಟಿ ನೀಡಿ ಅಲ್ಲಿ ಸಮಸ್ಯೆಯನ್ನು ಇ-ಮೇಲ್ ಮೂಲಕ ಕೇಂದ್ರಕ್ಕೆ ಕಳುಹಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.