ADVERTISEMENT

ಸಾರಿಗೆ ನೌಕರರಿಗೆ ಶೇ 15ರಷ್ಟು ವೇತನ ಹೆಚ್ಚಳ: ಸಚಿವ ಶ್ರೀರಾಮುಲು ಹೇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮಾರ್ಚ್ 2023, 9:14 IST
Last Updated 16 ಮಾರ್ಚ್ 2023, 9:14 IST
   

ಬೆಂಗಳೂರು: ಸಾರಿಗೆ ಇಲಾಖೆ ಸಿಬ್ಬಂದಿ ವೇತನ ಪರಿಷ್ಕರಣೆ ಸಂಬಂಧ ಗುರುವಾರ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಶೇ.15 ರಷ್ಟು ವೇತನ ಹೆಚ್ಚಳ ಮಾಡೋಕೆ ನಿರ್ಧಾರ ಮಾಡಲಾಗಿದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳೆದ 27 ವರ್ಷಗಳಲ್ಲಿ ಅತ್ಯಧಿಕ ವೇತನ ಪರಿಷ್ಕರಣೆಯನ್ನು ನಮ್ಮ ಸರ್ಕಾರ ಈಗ ಮಾಡಿದೆ ಎಂದು ಹೇಳಿದ್ದಾರೆ.

ಈ ನಿರ್ಧಾರದಿಂದ ರಾಜ್ಯದ ಎಲ್ಲ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಅಂದಾಜು ₹550 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಇದು ನಮ್ಮ ಸಿಬ್ಬಂದಿಗೆ ಶುಭ ಸುದ್ದಿ ಆಗಿದ್ದು, ಸದಾ ಉತ್ತಮ ಜನಸೇವೆಗೆ ಹೆಸರು ಮಾಡಿರೋ ನಮ್ಮ ಸಿಬ್ಬಂದಿ, ತಾವು ನೀಡಿರುವ ಬಂದ್ ಕರೆ ಹಿಂಪಡೆದು ಎಂದಿನಂತೆ ಉತ್ತಮ ಸೇವೆಗಳನ್ನು ಯಾವುದೇ ವ್ಯತ್ಯಯ ಆಗದಂತೆ ಮುಂದುವರಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದು ರಾಮುಲು ತಿಳಿಸಿದ್ದಾರೆ.

ಶೇ 20 ರಷ್ಟು ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿರುವ ಸಾರಿಗೆ ನಿಗಮಗಳ ನೌಕರರು ಇದೇ ಮಾರ್ಚ್ 24 ರಂದು ರಾಜ್ಯದಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದರು. ರಾಜ್ಯ ಸರ್ಕಾರ ಶೇ 14 ರಷ್ಟು ಮಾಡಬಹುದು ಎನ್ನಲಾಗಿತ್ತು. ಆದರೆ, ಇದೀಗ ಶೇ 15 ರಷ್ಟು ವೇತನ ಹೆಚ್ಚಳ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.