ಸವದತ್ತಿ (ಬೆಳಗಾವಿ ಜಿಲ್ಲೆ): ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ತೆಗ್ಗಿಹಾಳ ಗ್ರಾಮದ ಹೊಲದ ಗೋದಾಮಿನಲ್ಲಿ ಇಟ್ಟಿದ್ದ 1642 ಕುಕ್ಕರ್‌ಗಳನ್ನು ಪೊಲೀಸರು ಶನಿವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ಇವುಗಳ ಒಟ್ಟು ಮೌಲ್ಯ ₹ 21.32 ಲಕ್ಷಕ್ಕೂ ಹೆಚ್ಚು ಎನ್ನಲಾಗಿದೆ.
ತೆಗ್ಗಿಹಾಳ ಗ್ರಾಮದ ಹೊಲದಲ್ಲಿ ನಿರ್ಮಿಸಿದ ತಗಡಿ ಶೆಡ್‌ನಲ್ಲಿ ಕುಕ್ಕರ್‌ಗಳನ್ನು ಸಂಗ್ರಹಿಸಿ ಇಡಲಾಗಿದೆ ಎಂಬ ಮಾಹಿತಿ ಆಧರಿಸಿ ದಾಳಿ ಮಾಡಿದ ಪೊಲೀಸರಿಗೆ ಹೊಸ ಕುಕ್ಕರ್‌ಗಳ ಮೂಟೆಯೇ ಸಿಕ್ಕಿತು. ಅಧಿಕಾರಿಗಳು ದಾಳಿ ಮಾಡಿದಾಗ ಸ್ಥಳದಲ್ಲಿ ಯಾರೂ ಇರಲಿಲ್ಲ. ಬಾಗಿಲು ಒಡೆದು ಒಳನುಗ್ಗಬೇಕಾಯಿತು.
ಕುಕ್ಕರ್‌ಗಳ ಜತೆಗೆ ಯಾವ ಅಭ್ಯರ್ಥಿಯ ಚಿತ್ರ ಅಥವಾ ಪ್ರಚಾರ ಪತ್ರಗಳು ಪತ್ತೆಯಾಗಿಲ್ಲ. ಹೀಗಾಗಿ, ಇವುಗಳನ್ನು ಸಂಗ್ರಹಿಸಿದ್ದು ಯಾರು ಎಂದು ಇನ್ನೂ ಗೊತ್ತಾಗಿಲ್ಲ. ಎಲ್ಲವನ್ನೂ ಸವದತ್ತಿ ವಲಯ ಅಧಿಕಾರಿಗಳ ಸುಪರ್ದಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.