ಬೆಂಗಳೂರು: ರಾಜ್ಯದಲ್ಲಿ ಏ. 26ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ 1,700 ಬಿಎಂಟಿಸಿ ಬಸ್ ಮತ್ತು 2,780 ಕೆಎಸ್‌ಆರ್‌ಟಿಸಿ ಬಸ್‌ಗಳು ಬಳಕೆಯಾಗಲಿವೆ.
ಇವಿಎಂ, ವಿವಿಪ್ಯಾಟ್‌ಗಳೊಂದಿಗೆ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯಲು ಬಸ್‌ಗಳು ಬಳಕೆಯಾಗುತ್ತವೆ. ಗುರುವಾರ ಮಸ್ಟರಿಂಗ್ ಕೇಂದ್ರಗಳಿಂದ ಹೊರಟು ಮತಗಟ್ಟೆಗಳಿಗೆ ತಲುಪಿದ್ದು, ಶುಕ್ರವಾರ ಸಂಜೆ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಮತಗಟ್ಟೆಗಳಿಂದ ಡಿ ಮಸ್ಟರಿಂಗ್ ಕೇಂದ್ರಗಳಿಗೆ ವಾಪಸ್ ಆಗಲಿವೆ.
ಒಟ್ಟು ಬಸ್‌ಗಳಲ್ಲಿ ಶೇ 33ರಷ್ಟು ಚುನಾವಣೆ ಕಾರ್ಯಕ್ಕೆ ಬಳಕೆಯಾಗಲಿವೆ. ಉಳಿದ ಬಸ್‌ಗಳು ಎಂದಿನಂತೆ ಸಂಚರಿಸಲಿವೆ. ಎಲ್ಲ ಮಾರ್ಗಗಳಲ್ಲಿ ಬಸ್‌ಗಳು ಇರಲಿವೆ. ಆದರೆ, ಅವುಗಳ ಪ್ರಮಾಣ ಕಡಿಮೆ ಇರಲಿದೆ ಎಂದು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಮಾರ್ಗಕ್ಕೆ ಬಿಎಂಟಿಸಿ ಬಸ್: ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಚುನಾವಣೆ ಕಾರ್ಯಕ್ಕೆ ಬಳಸುತ್ತಿರುವುದರಿಂದ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸಂಚರಿಸಲಿದೆ. ಗುರುವಾರ 575, ಶುಕ್ರವಾರ 465, ಶನಿವಾರ 40 ಬಿಎಂಟಿಸಿ ಬಸ್‌ಗಳು ಕೆಎಸ್ಆರ್‌ಟಿಸಿ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಿವೆ. ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಿತ್ರದುರ್ಗ, ಕೋಲಾರ, ತುಮಕೂರು ಸಹಿತ ವಿವಿಧ ಜಿಲ್ಲೆಗಳಿಗೆ ಸಂಚರಿಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.