ಬೆಂಗಳೂರು: 2014-15 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಹರಿವು ಪ್ರಥಮ ಅತ್ಯುತ್ತಮ ಚಿತ್ರವಾಗಿ ಪ್ರಶಸ್ತಿ ಪಡೆದಿದ್ದು ಒಟ್ಟು 29 ವಿಭಾಗಗಳಿಗೆ ಪ್ರಶಸ್ತಿ ನೀಡಲಾಗಿದೆ.
ಶಿವರುದ್ರಯ್ಯ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಆಯ್ಕೆ ಮಾಡಿದೆ.
ಪ್ರಶಸ್ತಿಗಳ ವಿವರ ಇಂತಿದೆ
ಮೊದಲನೇ ಅತ್ಯುತ್ತಮ ಚಿತ್ರ: ಹರಿವು
ಎರಡನೇ ಅತ್ಯುತ್ತಮ ಚಿತ್ರ: ಅಭಿಮನ್ಯು
ಮೂರನೇ ಅತ್ಯುತ್ತಮ ಚಿತ್ರ: ಹಗ್ಗದ ಕೊನೆ
ಅತ್ಯುತ್ತಮ ಮಕ್ಕಳ ಚಿತ್ರ: ಬಾನಾಡಿ.
ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ಉಳಿದವರು ಕಂಡಂತೆ
ಅತ್ಯುತ್ತಮ ಮನರಂಜನಾ ಚಿತ್ರ: ಗಜಕೇಸರಿ,
ಅತ್ಯುತ್ತಮ ಪ್ರಾದೇಶಿಕ ಚಿತ್ರ: ವಿಷದ ಮಳೆ.
ಅತ್ಯುತ್ತಮ ನಟ : ಸಂಚಾರಿ ವಿಜಯ್
ಅತ್ಯುತ್ತಮ ನಟಿ: ಲಕ್ಷ್ಮೀ ಗೋಪಾಲಸ್ವಾಮಿ
ಅತ್ಯುತ್ತಮ ಪೋಷಕ ನಟಿ:ಡಾ.ಬಿ.ಜಯಶ್ರೀ(ಕೌದಿ)
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ: ಬರಗೂರು ರಾಮಚಂದ್ರಪ್ಪ
ಡಾ.ರಾಜ್ ಕುಮಾರ್ ಪ್ರಶಸ್ತಿ: ಬಸಂತ್ ಕುಮಾರ್ ಪಾಟೀಲ್
ವಿಷ್ಣುವರ್ಧನ್ ಪ್ರಶಸ್ತಿ: ಸುರೇಶ್ ಅರಸ್ (ಸಂಕಲನಕಾರ),
ಅತ್ಯುತ್ತಮ ಕಥೆ: ಲಿವಿಂಗ್ ಸ್ಮೈಲ್ ವಿದ್ಯಾ
ಅತ್ಯುತ್ತಮ ಚಿತ್ರಕಥೆ: ಪಿ.ಶೇಷಾದ್ರಿ(ವಿದಾಯ)
ಅತ್ಯುತ್ತಮ ಗೀತರಚನೆ : ಹುಲಿಕುಂಟೆಮೂರ್ತಿ(ಕೌದಿ),
ಅತ್ಯುತ್ತಮ ಕಥೆ ಪ್ರಶಸ್ತಿ: ನಾನು ಅವನಲ್ಲ ಅವಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.