ಬೆಂಗಳೂರು: ಏಳನೇ ರಾಜ್ಯ ವೇತನ ಆಯೋಗದ ಶಿಫಾರಸಿನ ಅನುಸಾರ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ₹20,208 ಕೋಟಿಗಳಷ್ಟು ಹೊರೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನೌಕರರ ವೇತನ ಪರಿಷ್ಕರಣೆ ತೀರ್ಮಾನ ಕುರಿತು ವಿಧಾನಸಭೆಯಲ್ಲಿ ಮಂಗಳವಾರ ಹೇಳಿಕೆ ನೀಡಿದ ಅವರು, ‘ಜುಲೈ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಿಸಲಾಗಿದೆ. ಆಗಸ್ಟ್ 1ರಿಂದ ಈ ತೀರ್ಮಾನ ಜಾರಿಗೆ ಬರಲಿದೆ. ನೌಕರರ ಮೂಲವೇತನದ ಶೇ 31ರಷ್ಟು ತುಟ್ಟಿಭತ್ಯೆ ಮತ್ತು ಶೇ 27.50ರಷ್ಟು ಫಿಟ್‌ಮೆಂಟ್ ಹೆಚ್ಚಿಸಲಾಗಿದೆ’ ಎಂದರು.
ನೌಕರರ ಮೂಲವೇತನ ಮತ್ತು ಪಿಂಚಣಿಯಲ್ಲಿ ಶೇಕಡ 58.50ರಷ್ಟು ಹೆಚ್ಚಳವಾಗುತ್ತದೆ. ಮನೆ ಬಾಡಿಗೆ ಭತ್ಯೆಯಲ್ಲಿ ಶೇ 32ರಷ್ಟು ಏರಿಕೆಯಾಗುತ್ತದೆ. ನೌಕರರ ಕನಿಷ್ಠ ಮೂಲವೇತನವು ₹ 17,000ದಿಂದ ₹ 27,000ಕ್ಕೆ ಹಾಗೂ ಗರಿಷ್ಠ ಮೂಲವೇತನವು ₹ 1,50,600ರಿಂದ ₹ 2,41,200ಕ್ಕೆ ಹೆಚ್ಚಳವಾಗುತ್ತದೆ ಎಂದು ಸದನಕ್ಕೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.