ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ ಎಡಿಜಿಪಿಗಳು ಸೇರಿದಂತೆ 21 ಪೊಲೀಸರಿಗೆ 2022ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ. ಗಣರಾಜ್ಯೋತ್ಸವ ದಿನಾದಂದು ಪದಕ ಪ್ರದಾನ ಕಾರ್ಯಕ್ರಮ ಜರುಗಲಿದೆ. ಪದಕ ಪಡೆದವರ ವಿವರ ಇಲ್ಲಿದೆ.
2022ನೇ ಸಾಲಿನ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ:
ಬಿ.ದಯಾನಂದ, ಎಡಿಜಿಪಿ, ರಾಜ್ಯ ಗುಪ್ತದಳ
ಆರ್. ಹಿತೇಂದ್ರ, ಎಡಿಜಿಪಿ, ಅಪರಾಧ ಮತ್ತು ತಾಂತ್ರಿಕ ಸೇವೆ
2022ನೇ ಸಾಲಿನ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ:
ಡಾ. ಬಿ.ಆರ್. ರವಿಕಾಂತೇಗೌಡ, ಬೆಂಗಳೂರು ಜಂಟಿ ಕಮಿಷನರ್ (ಸಂಚಾರ), ಬೆಂಗಳೂರು
ಆರ್. ಜನಾರ್ದನ್, ಕಮಾಂಡೆಂಟ್, ಕೆಎಸ್‌ಆರ್‌ಪಿ 5ನೇ ಪಡೆ, ಮೈಸೂರು
ಡಿ. ಕುಮಾರ್, ಎಸಿಪಿ, ಬೆಂಗಳೂರಿನ ಹಲಸೂರು ಉಪವಿಭಾಗ
ಪಿ. ರವಿ ಪ್ರಸಾದ್, ಡಿವೈಎಸ್ಪಿ, ಮೈಸೂರಿನ ಹುಣಸೂರು ಉಪ ವಿಭಾಗ
ವೆಂಕಟಪ್ಪ ನಾಯಕ ಓಲೇಕಾರ್, ರಾಯಚೂರಿನ ಸಿಂಧನೂರು ಉಪ ವಿಭಾಗ
ಮಲ್ಲೇಶಯ್ಯ, ಡಿವೈಎಸ್ಪಿ, ಬೆಂಗಳೂರು ಆನೇಕಲ್ ಉಪವಿಭಾಗ
ಕೆ.ಎನ್. ಯಶವಂತಕುಮಾರ್, ಡಿವೈಎಸ್ಪಿ, ಸಿಐಡಿ ಸೈಬರ್ ಕ್ರೈಂ
ಬಿ.ಎಂ. ಗಂಗಾಧರ್, ಎಸಿಪಿ, ಕಲಬುರ್ಗಿ ಸಿಸಿಆರ್‌ಬಿ
ಕೆ.ಎಂ. ರಮೇಶ್, ಡಿವೈಎಸ್ಪಿ, ಲೋಕಾಯುಕ್ತ
ಬಿ.ಕೆ. ಶೇಖರ್, ಡಿವೈಎಸ್ಪಿ, ಸಿಐಡಿ
ಎಸ್. ಕೃಷ್ಣಮೂರ್ತಿ, ಇನ್‌ಸ್ಪೆಕ್ಟರ್, ಲೋಕಾಯುಕ್ತ
ಸಿ.ಎಸ್. ಸಿಂಪಿ, ಸ್ಪೆಷಲ್ ಎಆರ್‌ಎಸ್‌ಐ, ಕೆಎಸ್‌ಆರ್‌ಪಿ 1ನೇ ಪಡೆ, ಬೆಂಗಳೂರು
ದಸ್ತಗೀರ್ ಮೊಹಮ್ಮದ್ ಹನೀಫ್ ಘೋರಿ, ಎಆರ್‌ಎಸ್‌ಐ, ಡಿಎಆರ್, ಬೆಳಗಾವಿ
ಎಚ್.ಆರ್. ಮುನಿರಾಜಯ್ಯ, ಎಎಸ್‌ಐ, ಅಪರಾಧ ಶಾಖೆ, ಬೆಂಗಳೂರು
ಮಾರುತಿ ಶಂಕರ್ ಜೋಗದಂಕರ್, ಎಎಸ್‌ಐ, ಡಿಸಿಆರ್‌ಬಿ, ಗದಗ
ವಿಜಯ್ ಕಾಂಚನ್, ಎಎಸ್‌ಐ, ಮಂಗಳೂರು ಪೂರ್ವ ಪೊಲೀಸ್ ಠಾಣೆ
ಶಂಕರರಾವ್ ಮಾರುತಿರಾವ್ ಶಿಂಧೆ, ಹೆಡ್ ಕಾನ್‌ಸ್ಟೆಬಲ್, ಬೆಳಗಾವಿ ಖಡೇಬಜಾರ್
ಲಿಂಗರಾಜಪ್ಪ, ಹೆಡ್ ಕಾನ್‌ಸ್ಟೆಬಲ್, ಮೈಸೂರಿನ ಎನ್‌ಆರ್ ಉಪವಿಭಾಗ
ಜಿ.ವಿ. ವೆಂಕಟೇಶಪ್ಪ, ಹೆಡ್ ಕಾನ್‌ಸ್ಟೆಬಲ್, ರಾಜ್ಯ ಗುಪ್ತದಳ
939 ಮಂದಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕ, ಶೌರ್ಯ ಪ್ರಶಸ್ತಿ
ನವದೆಹಲಿ (ಪಿಟಿಐ): ಗಣನೀಯ ಸೇವೆಗಾಗಿ 189 ಮಂದಿಗೆ ಶೌರ್ಯ ಪ್ರಶಸ್ತಿ ಸೇರಿ 939 ಪೊಲೀಸ್ ಸಿಬ್ಬಂದಿಯನ್ನು ಕೇಂದ್ರ ಸರ್ಕಾರ ಗಣರಾಜ್ಯೋತ್ಸವದ ಮುನ್ನಾ ದಿನವಾದ ಮಂಗಳವಾರ ಪೊಲೀಸ್ ಪದಕಕ್ಕಾಗಿ ಆಯ್ಕೆ ಮಾಡಿದೆ.
ಶೌರ್ಯ ಪ್ರಶಸ್ತಿ ಪುರಸ್ಕೃತ 189 ಸಿಬ್ಬಂದಿಯಲ್ಲಿ 134 ಮಂದಿಯನ್ನು ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಸೇವಾ ಹಂತದಲ್ಲಿ ತೋರಿದ ಶೌರ್ಯಕ್ಕಾಗಿ ಆಯ್ಕೆ ಮಾಡಲಾಗಿದೆ. 47 ಮಂದಿ ಈಶಾನ್ಯ ವಲಯದಲ್ಲಿ ಕಾರ್ಯನಿರ್ವಹಿಸಿದವರು.
ಶೌರ್ಯ ಪ್ರಶಸ್ತಿ, ರಾಷ್ಟ್ರಪತಿಗಳ ಪೊಲೀಸ್ ಪದಕ ಪುರಸ್ಕೃತರ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯವು ಪ್ರಕಟಿಸಿದೆ. 88 ಮಂದಿಗೆ ಸೇವಾ ಪದಕ ಮತ್ತು 662 ಮಂದಿಗೆ ವಿಶಿಷ್ಟ ಸೇವಾ ಪದಕ ನೀಡಿ ಪುರಸ್ಕರಿಸಲಾಗುತ್ತದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಗರಿಷ್ಠ ಅಂದರೆ 115 ಪದಕ ನೀಡಲಾಗಿದೆ. ಉಳಿದಂತೆ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್), ಛತ್ತೀಸಗಡದ 10 ಸಿಬ್ಬಂದಿ, ಒಡಿಶಾದ 9, ಮಹಾರಾಷ್ಟ್ರದ ಏಳು ಮಂದಿ, ಇಂಡೊ–ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಮತ್ತು ಸಶಸ್ತ್ರ ಸೀಮಾ ಬಲದ (ಎಸ್‌ಎಸ್‌ಬಿ) ತಲಾ ಮೂವರು, ಗಡಿ ಭದ್ರತಾ ಪಡೆಯ ಇಬ್ಬರು ಶೌರ್ಯಪ್ರಶಸ್ತಿ ಪುರಸ್ಕೃತರಲ್ಲಿ ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.