ADVERTISEMENT

2.96 ಲಕ್ಷ ಮನೆಗಳ ನಿರ್ಮಾಣ: ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 17:17 IST
Last Updated 30 ಮಾರ್ಚ್ 2022, 17:17 IST
   

ಬೆಂಗಳೂರು: ‘ರಾಜ್ಯದಲ್ಲಿ 2017-18ರಿಂದ ಇಲ್ಲಿಯವರೆಗೆ 2.96 ಲಕ್ಷ ಮನೆಗಳನ್ನು ನಿರ್ಮಿಸಲಾಗಿದ್ದು, 4 ಲಕ್ಷ ಮನೆಗಳ ನಿರ್ಮಾಣ ವಿವಿಧ ಹಂತದಲ್ಲಿವೆ’ ಎಂದು ವಸತಿ ಸಚಿವವಿ. ಸೋಮಣ್ಣ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಮಂಜುನಾಥ್ ಭಂಡಾರಿ ಅವರ ಪ್ರಶ್ನೆಗೆ, ‘ಯೋಜನೆಗಳ ಸಹಾಯ ಧನ ಹೆಚ್ಚಿಸಲಾಗಿದೆ’ ಎಂದು ಉತ್ತರಿಸಿದರು.

‘ಸರ್ಕಾರ ಫಲಾನುಭವಿಗಳಿಗೆ 1.20 ಲಕ್ಷ ಸಹಾಯ ಧನ ನೀಡುತ್ತದೆ. ಬೆಂಗಳೂರಿನಲ್ಲಿ 3 ಲಕ್ಷ ಸಹಾಯ ಧನ , ಉಳಿದ ನಗರಗಳಲ್ಲಿ ಸಹಾಯ ಧನವನ್ನು 87 ಸಾವಿರದಿಂದ 2 ಲಕ್ಷಕ್ಕೆ ಹೆಚ್ಚಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಕೇಂದ್ರ ಸರ್ಕಾರ 1.50 ಲಕ್ಷ ಮನೆಗಳನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಮಂಜೂರು ಮಾಡಿದೆ. ದಕ್ಷಿಣ ಕನ್ನಡ ಭಾಗದಲ್ಲಿ ಸರ್ಕಾರ ರೂಪಿಸುವ ಹೊಸ ಕಾನೂನುಗಳು ತಕ್ಷಣವೇ ಜಾರಿಗೆ ಬರುತ್ತವೆ. ಉಳಿದ ಜಿಲ್ಲೆಗಳಲ್ಲಿ ಇದೇ ರೀತಿ ಜಾರಿಯಾಗಬೇಕಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.