ADVERTISEMENT

ನಿರಾಶ್ರಿತರ ಕೇಂದ್ರಕ್ಕೆ 37 ಭಿಕ್ಷುಕರು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 16:28 IST
Last Updated 27 ಅಕ್ಟೋಬರ್ 2021, 16:28 IST
ಭಿಕ್ಷುಕನೊಬ್ಬನನ್ನು ಪೊಲೀಸರು ಸ್ಥಳಾಂತರಿಸುತ್ತಿರುವುದು 
ಭಿಕ್ಷುಕನೊಬ್ಬನನ್ನು ಪೊಲೀಸರು ಸ್ಥಳಾಂತರಿಸುತ್ತಿರುವುದು    

ಬೆಂಗಳೂರು: ಪಾದಚಾರಿ ಮಾರ್ಗ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದ ಒಟ್ಟು 37 ಭಿಕ್ಷುಕರನ್ನು ಪಶ್ಚಿಮ ವಿಭಾಗದ ಪೊಲೀಸರು ಕೊಟ್ಟಿಗೆಪಾಳ್ಯ ಹಾಗೂ ಕಾಮಾಕ್ಷಿಪಾಳ್ಯದಲ್ಲಿರುವ ನಿರಾಶ್ರಿತರ ಕೇಂದ್ರಗಳಿಗೆ ಕಳುಹಿಸಿದ್ದಾರೆ.

‘ಉಪ್ಪಾರಪೇಟೆಯಲ್ಲಿದ್ದ 20, ಕೆ.ಆರ್‌.ಮಾರುಕಟ್ಟೆ ಪ್ರದೇಶದಲ್ಲಿದ್ದ 6, ಬ್ಯಾಟರಾಯನಪುರ, ಚಂದ್ರಾ ಲೇಔಟ್‌ ಹಾಗೂ ಕೆಂಗೇರಿಯಲ್ಲಿದ್ದ ತಲಾ ಮೂವರು ಹಾಗೂ ವಿಜಯನಗರದಲ್ಲಿದ್ದ ಇಬ್ಬರು ಭಿಕ್ಷುಕರನ್ನು ನಿರಾಶ್ರಿತರ ಕೇಂದ್ರಗಳಿಗೆ ಕಳುಹಿಸಲಾಗಿದೆ. ಮೆಜೆಸ್ಟಿಕ್‌ ಬಸ್‌ ನಿಲ್ದಾಣ, ಅಣ್ಣಮ್ಮನ ದೇವಸ್ಥಾನದ ಸುತ್ತಮುತ್ತ ಗುರುವಾರವೂ ಕಾರ್ಯಾಚರಣೆ ನಡೆಸಲಾಗುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT