ADVERTISEMENT

4 ಸಾವಿರ ಕೋಳಿ ಮರಿಗಳನ್ನು ಜೀವಂತ ಸಮಾಧಿ ಮಾಡಿದ ಫಾರಂ ಮಾಲೀಕ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 2:59 IST
Last Updated 12 ಮಾರ್ಚ್ 2020, 2:59 IST
   

ಶಿವಮೊಗ್ಗ: ಕೊರೊನಾ ವೈರಸ್ ಹರಡುವ ಭೀತಿಗೆ ಕೋಳಿ ಮಾಂಸದ ದರ ಗಣನೀಯವಾಗಿ ಕುಸಿದ ಪರಿಣಾಮ ಬೇಸರಗೊಂಡ ಸಂತೇಕಡೂರಿನ ಫರಂ ಮಾಲೀಕ 4 ಸಾವಿರ ಕೋಳಿ ಮರಿಗಳನ್ನು ಬುಧವಾರ ಜೀವಂತ ಸಮಾಧಿ ಮಾಡಿದ್ದಾರೆ.

ಕೆ.ಜಿ. ಕೋಳಿ ಮಾಂಸಕ್ಕೆ ₹ 170 ಇದ್ದ ದರ ₹50 ಕ್ಕೆ ಕುಸಿದಿದೆ. ಇದರಿಂದ ಫಾರಂನಲ್ಲಿದ್ದ ಕೋಳಿ ಖರೀದಿಸುವವರೇ ಇಲ್ಲವಾಗಿದೆ. ಹಾಗಾಗಿ ಇಂತಹ ನಿರ್ಧಾರಕ್ಕೆ ಬರಬೇಕಾಯಿತು ಎಂದು ಮಾಲೀಕ ಶ್ರೀನಿವಾಸ್ ಮಾಹಿತಿ‌ ನೀಡಿದರು.

ಈಗಾಗಲೇ ₹ 2.5 ಲಕ್ಷ ಕಳೆದುಕೊಂಡಿದ್ದಾರೆ. ಮತ್ತೆ ಸಾಕಲು ಮುಂದಾದರೆಇನ್ನೂ ಹೆಚ್ಚು ನಷ್ಟ ಎಂದು ಫಾರಂನಲ್ಲೇ 12 ಅಡಿ ಗುಂಡಿ ತೋಡಿ 22 ದಿನಗಳ ಕೋಳಿ ಮರಿಗಳನ್ನ ಹೂತುಹಾಕಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.