ADVERTISEMENT

44 ತಹಶೀಲ್ದಾರ್‌ ಗ್ರೇಡ್‌– 2 ಅಧಿಕಾರಿಗಳ ಸ್ಥಳ ನಿಯುಕ್ತಿ: ಕಂದಾಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 15:40 IST
Last Updated 21 ಜುಲೈ 2024, 15:40 IST
<div class="paragraphs"><p>ವಿಧಾನ ಸೌಧ</p></div>

ವಿಧಾನ ಸೌಧ

   

(ಸಾಂಕೇತಿಕ ಚಿತ್ರ)

ಬೆಂಗಳೂರು: ತರಬೇತಿಯಲ್ಲಿದ್ದ 44 ತಹಶೀಲ್ದಾರ್‌ ಗ್ರೇಡ್‌– 2 ಅಧಿಕಾರಿಗಳನ್ನು ಸ್ಥಳ ನಿಯುಕ್ತಿಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ADVERTISEMENT

2017ನೇ ಸಾಲಿನಲ್ಲಿ ನಡೆದ 106 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ಈ ಎಲ್ಲ ಅಧಿಕಾರಿಗಳು ಆಯ್ಕೆ ಆಗಿದ್ದರು. ಪರೀಕ್ಷಾರ್ಥ ಅವಧಿ ಪೂರ್ಣಗೊಳಿಸಿದ ಕಾರಣ ಎಲ್ಲರಿಗೂ ಹುದ್ದೆ ತೋರಿಸಲಾಗಿದೆ. ಈ ಪೈಕಿ, ಬಹುತೇಕ ಅಧಿಕಾರಿಗಳನ್ನು ರಾಜ್ಯದ ವಿವಿಧ ತಾಲ್ಲೂಕು ಕಚೇರಿಗಳಿಗೆ ನಿಯುಕ್ತಿಗೊಳಿಸಲಾಗಿದೆ. 

ತರಬೇತಿ ಶಿಬಿರದ ಕೊನೆಯ ದಿನ ಅಧಿಕಾರಿಗಳ ಜೊತೆ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಹುದ್ದೆ, ಅಧಿಕಾರ ಸ್ವಾರ್ಥ ಸಾಧನೆಗಲ್ಲ. ಬದಲಾಗಿ ಪ್ರಾಮಾಣಿಕವಾದ ಜನಪರ ಸೇವೆಗೆ ಎನ್ನುವುದು ನೆನಪಿರಲಿ’ ಎಂದು ಕಿವಿಮಾತು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.