ಬೆಂಗಳೂರು: ರಂಗಭೂಮಿಗೆ ಸಲ್ಲಿಸಿರುವ ಸೇವೆ ಪರಿಗಣಿಸಿ ದಾವಣಗೆರೆಯ ಮಾನೂಬಾಯಿ ನಾಕೋಡ ಮತ್ತು ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಕ್ರಮವಾಗಿ 2015 ಮತ್ತು 2016ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
‘ರಂಗ ಸಾಧನೆ’ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿ ಫಲಕ ಮತ್ತು ತಲಾ ₹50 ಸಾವಿರ ಒಳಗೊಂಡಿದೆ. ರಂಗಭೂಮಿಯ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರಿಗೆ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. 2015ರಲ್ಲಿ 15 ಹಾಗೂ 2016ರಲ್ಲಿ 25 ರಂಗ ಕರ್ಮಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಾರ್ಷಿಕ ಪ್ರಶಸ್ತಿಯು ₹25 ಸಾವಿರ ನಗದು ಒಳಗೊಂಡಿದೆ.
ರಂಗಭೂಮಿ ಪುಸ್ತಕ ಪುರಸ್ಕಾರ: ಪ್ರಕಾಶ ಗರುಡ ಅವರ ‘ಕಂಪನಿ ನಾಟಕ ಅರ್ಥಾತ್ ವೃತ್ತಿ ರಂಗಭೂಮಿ’ ಹಾಗೂ ಗೋಪಾಲ ವಾಜಪೇಯಿ ಅವರ ‘ರಂಗದ ಒಳಗೆ ಮತ್ತು ಹೊರಗೆ’ ನಾಟಕ ಕೃತಿಗಳು ಪುಸ್ತಕ ಪುರಸ್ಕಾರಕ್ಕೆ ಆಯ್ಕೆಯಾಗಿವೆ.
*
2016ನೇ ಸಾಲಿನ ಪ್ರಶಸ್ತಿ
ಎಲ್. ರಾಮಕೃಷ್ಣ (ಬೆಂಗಳೂರು)
ವಿರೂಪಾಕ್ಷರಾವ್ ಮೊರಗೇರಿ (ಬಳ್ಳಾರಿ)
ಬಸವರಾಜ ಹೂಗಾರ (ವಿಜಯಪುರ)
ಮಹಾಂತಯ್ಯ ಖಾನಪೂರ (ಯಾದಗಿರಿ)
ಎಚ್. ಹನುಮಂತ ನರಿಬೋಳ (ಕಲಬುರ್ಗಿ)
ಅಶೋಕ ನೇಸರಗಿ (ಬೆಳಗಾವಿ)
ಸಿದ್ಧಪ್ಪ ನಿಂಗಪ್ಪ ಗುಳ್ಳೆ (ಗದಗ)
ಭಾಗ್ಯಶ್ರೀ (ಬೆಂಗಳೂರು)
ಮಹದೇವಪ್ಪ ಹುಣಶ್ಯಾಳ (ಬೀದರ್)
ಬೈರನಹಳ್ಳಿ ಶಿವರಾಂ (ರಾಮನಗರ)
ಚೌಡಶೆಟ್ಟಿ (ಮಂಡ್ಯ)
ವೆಂಕಟೇಶ್ (ಹಾಸನ)
ವಾಸುದೇವರಾವ್ (ಉಡುಪಿ)
ಲಕ್ಷ್ಮಣದಾಸ್ (ತುಮಕೂರು)
ಚೇತನ ಡಿ ಪ್ರಸಾದ್ (ಕೋಲಾರ)
ಕಮಲಮ್ಮ ಬೀಳಗಿ (ಬಾಗಲಕೋಟೆ)
ಆಂಜನೇಯ (ಬೆಂಗಳೂರು ಗ್ರಾಮಾಂತರ)
ಲಲಿತಾ ಸಣ್ಣಂಗಿ (ಹಾವೇರಿ)
ಛಾಯಾ ರೆಡ್ಡಿ (ಧಾರವಾಡ)
ವಿಜಯಕಾಶಿ (ಶಿವಮೊಗ್ಗ)
ಪ್ರೇಮಾ ಆರ್ ತಾಳೀಕೋಟಿ (ವಿಜಯಪುರ)
ವೆಂಕಟೇಶ್ ಹೆಗಡೆ (ಉತ್ತರ ಕನ್ನಡ)
ಸುಂದರಮೂರ್ತಿ ಆಲೆಮನೆ, (ಬೆಂಗಳೂರು)
ಎ. ಭದ್ರಪ್ಪ (ದಾವಣಗೆರೆ)
ಜಿ.ಎಂ. ಸಿದ್ಧರಾಜು (ಮಂಡ್ಯ)
*
2015ನೇ ಸಾಲಿನ ಪ್ರಶಸ್ತಿ
ದೇವಿರಪ್ಪ ಶಿವಪ್ಪ ಬಣಕಾರ(ಹಾವೇರಿ)
ವೆಂಕಟೇಶ ಕುಲಕರ್ಣಿ, (ಬಾಗಲಕೋಟೆ)
ಕೆ.ವಿ. ಕೃಷ್ಣಯ್ಯ (ಬೆಂಗಳೂರು ನಗರ)
ಪೂಜಾರ ಚಂದ್ರಪ್ಪ (ದಾವಣಗೆರೆ)
ಟಿ.ಆರ್.ರಾಮಚಂದ್ರರಾವ್ (ಬೆಂಗಳೂರು)
ಕೆ.ವಿ. ವೆಂಕಟೇಶ್ (ಚಾಮರಾಜನಗರ)
ಎಸ್.ಕೆ. ಸೂರಯ್ಯ (ಚಿತ್ರದುರ್ಗ)
ಸರೋಜಿನಿ (ಮೈಸೂರು)
ವಿಠ್ಠಲಕೊಪ್ಪ (ಧಾರವಾಡ)
ಕಿಶೋರ್ ಡಿ.ಶೆಟ್ಟಿ (ಮಂಗಳೂರು)
ಚಂದ್ರು ಉಡುಪಿ (ಶಿರಸಿ)
ಮಾನಮ್ಮ ರಾಯನಗೌಡ (ರಾಯಚೂರು)
ವನಜಶ್ರೀ ಶೆಟ್ಟಿ (ಬೆಂಗಳೂರು)
ಬಿ.ಇ. ತಿಪ್ಪೇಸ್ವಾಮಿ (ದಾವಣಗೆರೆ)
ಪರಶುರಾಮ ಪ್ರಿಯ (ಕೊಪ್ಪಳ)
*
ಕಲ್ಚರ್ ಕಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ ಪ್ರಶಸ್ತಿ:
ಮುದುಕೇಶ ಚಿಂದೋಡಿ, ದಾವಣಗೆರೆ (2015).
ಮಹದೇವಪ್ಪ, ಬೆಂಗಳೂರು(2016)
ತಲಾ ₹ 5,000 ನಗದು
ನಟ ರತ್ನ ಚಿಂದೋಡಿ ವೀರಪ್ಪ ದತ್ತಿ ಪುರಸ್ಕಾರ:
ಗೂಡು ಸಾಹೇಬ ಚಟ್ನಿಹಾಳ, ಬಾಗಲಕೋಟೆ(2015)
ಬಿ.ಗಂಗಾಧರ, ತುಮಕೂರು (2016)
ತಲಾ ₹ 5,000 ನಗದು
ಚಿಂದೋಡಿ ಲೀಲಾ ಪುರಸ್ಕಾರ:
ಮಮತಾ ಗುಡೂರು(2015)
ಉಮಾ, ರಾಣೆ ಬೆನ್ನೂರು(2016)
ತಲಾ ₹5,000 ನಗದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.