ADVERTISEMENT

ಅರಣ್ಯ ಇಲಾಖೆ ಲೋಪ: ಸಾರ್ವಜನಿಕರಿಗೆ ವಿತರಿಸಬೇಕಾಗಿದ್ದ 5 ಸಾವಿರ ಸಸಿಗಳ ನಾಶ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 6:31 IST
Last Updated 17 ಅಕ್ಟೋಬರ್ 2018, 6:31 IST
   

ಬೆಂಗಳೂರು: ಚಿತ್ರದುರ್ಗ ಜಿಲ್ಲೆಯ ಐನಹಳ್ಳಿಯಲ್ಲಿರುವ ಅರಣ್ಯ ಇಲಾಖೆಯ ನರ್ಸರಿಯಲ್ಲಿ 5 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನಾಶ ಮಾಡಲಾಗಿದೆ.

ಎರಡು ದಿನಗಳ ಹಿಂದೆ ಸಸಿಗಳನ್ನು ನಾಶ ಮಾಡಲಾಗಿದ್ದು, ಬುಧವಾರ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆಯೇ ಇವುಗಳನ್ನು ನಾಶ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

ಸಾಮಾಜಿಕ ಅರಣ್ಯ ವಿಭಾಗ ಸಾರ್ವಜನಿಕರಿಗೆ ವಿತರಿಸಲು ಸಸಿಗಳನ್ನು ಬೆಳೆಸಿತ್ತು. ಬೇವು, ಹಲಸು ಸೇರಿ ವಿವಿಧ ಜಾತಿಯ ಸಸ್ಯಗಳು ಇಲ್ಲಿದ್ದವು. ನೀರು, ಗೊಬ್ಬರ ಹಾಕಿ ಇವುಗಳನ್ನು ಪೋಷಣೆ ಮಾಡಲಾಗಿತ್ತು.

ADVERTISEMENT

ಕಳೆದ ವರ್ಷದ ಸಸಿಗಳು ಇದ್ದರೂ, ಮತ್ತೆ ಹೊಸ ಸಸಿಗಳನ್ನು ಖರೀದಿ ಮಾಡಲಾಗಿತ್ತು ಎನ್ನಲಾಗಿದೆ. ಲೋಪವನ್ನು ಮುಚ್ಚಿಕೊಳ್ಳಲು ಹಳೆಯ ಸಸಿಗಳನ್ನು ನಾಶ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.