ನವದೆಹಲಿ: ಕೊರೊನಾ ಬೆನ್ನಲ್ಲೇ ದೇಶವನ್ನು ಕಾಡುತ್ತಿರುವ ಕಪ್ಪು ಶಿಲೀಂಧ್ರ ಚಿಕಿತ್ಸೆಗೆಬಳಸುವ ಲಿಪೊಸೊಮಾಲ್ ಎಂಫೋಟೆರಿಸಿನ್-ಬಿ ಔಷಧಿಯ ಮತ್ತಷ್ಟು ವಯಲ್ಸ್ ಅನ್ನು ಇಂದು ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಿರುವುದಾಗಿ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇಂದು ಹೆಚ್ಚುವರಿಯಾಗಿ 61,120 ವಯಲ್ಸ್ ಲಿಪೊಸೊಮಾಲ್ ಎಂಫೋಟೆರಿಸಿನ್-ಬಿ ಹಂಚಿಕೆ ಮಾಡಿದ್ದೇವೆ. ಕರ್ನಾಟಕಕ್ಕೆ 5240 ವಯಲ್ಸ್ ಒದಗಿಸಲಾಗಿದೆ.
ದೇಶದಾದ್ಯಂತ ಇದುವರೆಗೆ 7.9 ಲಕ್ಷ ವಯಲ್ಸ್ ಹಂಚಿಕೆ ಮಾಡಲಾಗಿದ್ದು, ರಾಜ್ಯಕ್ಕೆ 61,120 ವಯಲ್ಸ್ ದೊರೆತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಪ್ಪು ಶಿಲೀಂಧ್ರ ಪೀಡಿತರ ಚಿಕಿತ್ಸೆಗೆ ಸೂಕ್ತ ಪ್ರಮಾಣದ ಎಂಫೋಟೆರಿಸಿನ್-ಬಿ ಔಷಧ ಸರಬರಾಜು ಆಗದಿರುವ ಬಗ್ಗೆ ಇತ್ತೀಚೆಗೆ ವಿಪಕ್ಷಗಳು ಸದಾನಂದಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.