ಧಾರವಾಡ:ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಂದ್ರಶೇಖರ ಪಾಟೀಲರ ಅಧ್ಯಕ್ಷ ಭಾಷಣದಲ್ಲಿ ಪ್ರಸ್ತಾಪ
ವಾದ ರಾಜಕೀಯದ ಒಲವಿಗೆ ’ಸಾಹಿತ್ಯ ಸಂಭ್ರಮ’ದಲ್ಲಿ ಕಟು ಟೀಕೆ ಎದುರಾಯಿತು.
‘ಸಾಹಿತ್ಯದಲ್ಲಿ ಸಕ್ರಿಯ ರಾಜಕಾರಣ ಪರೋಕ್ಷ ಪ್ರವೇಶ ಪಡೆಯುತ್ತಿದೆ. ಇದಕ್ಕೊಂದು ಸ್ಪಷ್ಟ ಉದಾಹರಣೆ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚುನಾವಣಾ ಪ್ರಚಾರ ಭಾಷಣವಾದ ಸಮ್ಮೇಳನಾಧ್ಯಕ್ಷರ ನುಡಿ. ಇದು ನೇರವಾಗಿ ಸಾಹಿತ್ಯ ಸಂಭ್ರಮಕ್ಕೆ ಸಂಬಂಧಿಸದಿದ್ದರೂ ಈ ವಿದ್ಯಮಾನ ಅನೇಕರ ಆತಂಕಕ್ಕೆ ಕಾರಣವಾಗಿದೆ’ ಎಂದು ಗಿರಡ್ಡಿ ಗೋವಿಂದರಾಜ ತಮ್ಮ ಆಶಯ ಭಾಷಣದಲ್ಲಿ ಹೇಳಿದರು.
‘ಸಮ್ಮೇಳನಾಧ್ಯಕ್ಷರು ಒಂದು ಪಕ್ಷಕ್ಕೆ ಮತ ನೀಡಬೇಕು ಎಂದು ಸಾರಿ ಹೇಳಿದ್ದನ್ನು ಎಡಪಂಥೀಯ ವರ್ಗದವರು ಸಮರ್ಥಿಸಿಕೊಂಡರು. ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ಮಾತನಾಡಿದರೆ ಏನು ತಪ್ಪು ಎನ್ನುವುದು ಅವರ ಪ್ರಶ್ನೆ. ಸಾಹಿತ್ಯದಲ್ಲಿ ರಾಜಕೀಯ ಇರಬಾರದು ಎಂದು ಹಟ ಹಿಡಿದರೂ ಅದು ನಮ್ಮ ಮಾತು ಕೇಳುವುದಿಲ್ಲ. ಆದರೆ ಅವೆಲ್ಲವೂ ಸೈದ್ಧಾಂತಿಕ ನೆಲೆಯಲ್ಲಿನಡೆಯುವ ಕೆಲಸ’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.