ಬೆಂಗಳೂರು: ‘ವೈಮಾನಿಕ ಪ್ರದರ್ಶನ ನೀಡಲು ಆರು ತಿಂಗಳು ನಿರಂತರ ತಾಲೀಮು ನಡೆಯುತ್ತದೆ. ದೈತ್ಯ ವಿಮಾನಗಳನ್ನು ಪಳಗಿಸಿದ ಅನುಭವ ಇರಬೇಕು, ದೇಹದ ತೂಕದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು...’
ಇದು ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದ ಕೇಂದ್ರ ಬಿಂದು ‘ಸೂರ್ಯಕಿರಣ’ ತಂಡದ ವಿಂಗ್ ಕಮಾಂಡರ್ ದಿಲ್ಲಾನ್ ಅವರು ಅನುಭವ ಹಂಚಿಕೊಂಡರು.
‘ಸುಖೋಯ್, ರಫೇಲ್ ರೀತಿಯ ದೈತ್ಯ ವಿಮಾನಗಳನ್ನು ಪಳಗಿಸಿದ ಅನುಭವ ಇರಬೇಕು. ನಿತ್ಯ 7ರಿಂದ 8 ತಾಸು ನಿದ್ರೆ ಆಗಲೇಬೇಕು. ಏರೋ ಇಂಡಿಯಾ ಮತ್ತು ಭಾರತೀಯ ವಾಯುಸೇನೆ ದಿನಾಚರಣೆ ಸಂದರ್ಭದಲ್ಲಿ ನೀಡುವ ವೈಮಾನಿಕ ಪ್ರದರ್ಶನಗಳು ನಮಗೆ ಸ್ಮರಣೀಯ ಕ್ಷಣಗಳ ಜೊತೆಗೆ ಸವಾಲು ಕೂಡ’ ಎಂದರು.
ಸೂರ್ಯಕಿರಣ್ ಅತ್ಯಂತ ವೇಗವಾಗಿ ಹಾರುವ ಮತ್ತು ಅತಿ ಹೆಚ್ಚು ಸಾಮರ್ಥ್ಯದ ವಿಮಾನ. ಇವುಗಳನ್ನು ಚಾಲನೆ ಮಾಡುವುದು ಸಂತಸದ ವಿಷಯ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.