ADVERTISEMENT

ಸಾಕ್ಷರ ಸನ್ಮಾನ | 6,346 ಗ್ರಾ.ಪಂ. ಸದಸ್ಯರಿಗೆ ಅಕ್ಷರಾಭ್ಯಾಸ: ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 15:35 IST
Last Updated 31 ಆಗಸ್ಟ್ 2024, 15:35 IST
<div class="paragraphs"><p>ಪ್ರಿಯಾಂಕ್ ಖರ್ಗೆ</p></div>

ಪ್ರಿಯಾಂಕ್ ಖರ್ಗೆ

   

ಬೆಂಗಳೂರು: ಗ್ರಾಮ ಪಂಚಾಯಿತಿಗಳ 6,346 ಅನಕ್ಷರಸ್ಥ ಚುನಾಯಿತ ಪ್ರತಿನಿಧಿಗಳನ್ನು ಸಾಕ್ಷರರನ್ನಾಗಿಸುವ ‘ಸಾಕ್ಷರ ಸನ್ಮಾನ’ ಕಾರ್ಯಕ್ರಮವು ಭಾನುವಾರದಿಂದ (ಸೆ.1) ಆರಂಭವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

‘ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ 94,775 ಚುನಾಯಿತ ಪ್ರತಿನಿಧಿಗಳಿದ್ದು, ಅವರಲ್ಲಿ 9,357 ಮಂದಿ ಅನಕ್ಷರಸ್ಥರಿದ್ದರು. ಇವರನ್ನು ಸಾಕ್ಷರರನ್ನಾಗಿಸುವ ಮೊದಲ ಹಂತದ ಕಾರ್ಯಕ್ರಮ ಹಿಂದಿನ ವರ್ಷದಲ್ಲಿ ನಡೆದಿತ್ತು. ಆಗ 2,403 ಮಹಿಳೆಯರು ಮತ್ತು 608 ಪುರುಷರು ಸೇರಿ ಒಟ್ಟು 3,011 ಪ್ರತಿನಿಧಿಗಳಿಗೆ ತರಬೇತಿ ನೀಡಲಾಗಿತ್ತು. ಎರಡನೇ ಹಂತದ ಕಾರ್ಯಕ್ರಮ ಈಗ ಆರಂಭವಾಗಲಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘21 ಜಿಲ್ಲೆಗಳಲ್ಲಿ ಇದೇ 1ರಿಂದ ಅಕ್ಟೋಬರ್ 20ರವರೆಗೆ ತರಬೇತಿ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ 2 ಗಂಟೆಗಳಂತೆ 50 ದಿನಗಳಲ್ಲಿ ಒಟ್ಟು 100 ಗಂಟೆ ತರಬೇತಿ ನೀಡಲಾಗುತ್ತದೆ’ ಎಂದರು.

‘ಈ ಸದಸ್ಯರಿಗೆ ಓದು–ಬರಹ ಕಲಿಸಿ, ಲೆಕ್ಕಾಚಾರದಲ್ಲಿ ಸ್ವಾವಲಂಬಿಗಳಾಗಿ ಮಾಡುವುದು, ಸಭಾ ನೋಟಿಸ್‌, ನಡಾವಳಿ ಮತ್ತು ಮಾರ್ಗಸೂಚಿಗಳನ್ನು ಸ್ವತಃ ಓದಿ ಆರ್ಥಮಾಡಿಕೊಳ್ಳುವಂತೆ ಸಜ್ಜುಗೊಳಿಸುವುದು ಮತ್ತು ಸ್ಥಳೀಯ ಆಡಳಿತದ ನೀತಿ ನಿರೂಪಣೆಯಲ್ಲಿ ಸಕ್ರಿಯವಾಗಿ ಭಾಗಿಯಾಗುವಂತೆ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ’ ಎಂದರು.

ಯಾರಿಗೆ ತರಬೇತಿ

5234 ಚುನಾಯಿತ ಅನಕ್ಷರಸ್ಥ ಮಹಿಳಾ ಪ್ರತಿನಿಧಿಗಳು

1112 ಚುನಾಯಿತ ಅನಕ್ಷರಸ್ಥ ಪುರುಷ ಪ್ರತಿನಿಧಿಗಳು

‘ಸಾಕ್ಷರ ಸನ್ಮಾನ’ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗುವವರಿಗೆ ತರಬೇತಿ ಕಿಟ್‌ ಮತ್ತು ಗೌರವಧನ ಬೋಧಕರಿಗೆ ಗೌರವಧನ ನೀಡಲಾಗುತ್ತದೆ.
ಪ್ರಿಯಾಂಕ್‌ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.