ADVERTISEMENT

ಕಿರ್ಗಿಸ್ತಾನ: 8 ಜನರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 20:25 IST
Last Updated 7 ಏಪ್ರಿಲ್ 2020, 20:25 IST
   

ಬೀದರ್‌: ಪ್ರವಾಸಿ ವೀಸಾ ಪಡೆದು ಇಸ್ಲಾಂ ಧರ್ಮದ ಪ್ರಚಾರ ಕೈಗೊಂಡ ಆರೋಪದ ಮೇರೆಗೆ ಕಿರ್ಗಿಸ್ತಾನದ ಎಂಟು ಪ್ರಜೆಗಳ ವಿರುದ್ಧ ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಲ್ಲ ಎಂಟು ಜನರ ಪಾಸ್‌ಪೋರ್ಟ್‌ ಹಾಗೂ ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ಇವರೊಂದಿಗೆ ಎಷ್ಟು ಜನ ಜಿಲ್ಲೆಗೆ ಬಂದಿದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.

‘ವೀಸಾ ನಿಯಮ ಉಲ್ಲಂಘನೆಗಾಗಿಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಸ್ತುತ ಇವರೆಲ್ಲ ನಗರದ ರಟಕಲ್‌ಪುರಾ ಮರ್ಕಜ್‌ ಮಸೀದಿಯಲ್ಲಿ (ಹೋಮ್‌ ಕ್ವಾರಂಟೈನ್) ಇದ್ದು, ಅವರ ಮೇಲೆ ನಿಗಾ ಇಟ್ಟಿದ್ದೇವೆ’ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.