ADVERTISEMENT

ರಾಜ್ಯದ 948 ಜಲಮೂಲ ಒತ್ತುವರಿ: ಕೇಂದ್ರ ಜಲಶಕ್ತಿ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2023, 20:30 IST
Last Updated 20 ಜುಲೈ 2023, 20:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕರ್ನಾಟಕದಲ್ಲಿ 948 ಜಲಮೂಲಗಳು ಒತ್ತುವರಿಯಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವಾಲಯವು ಲೋಕಸಭೆಗೆ ಗುರುವಾರ ತಿಳಿಸಿದೆ.

ಸಚಿವಾಲಯವು ಈ ವರ್ಷ ಜಲಮೂಲಗಳ ಸಮೀಕ್ಷೆ ನಡೆಸಿದ್ದು, ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ 26,224 ಹಾಗೂ ನಗರ ಪ್ರದೇಶದಲ್ಲಿ 789 ಜಲಮೂಲಗಳಿವೆ. ಈ ಪೈಕಿ, ಗ್ರಾಮೀಣ ಪ್ರದೇಶದ 948 ಜಲಮೂಲಗಳು ಒತ್ತುವರಿಯಾಗಿವೆ. ನಗರ ಪ್ರದೇಶದ ಯಾವುದೇ ಜಲಮೂಲ ಒತ್ತುವರಿಯಾಗಿಲ್ಲ ಎಂದು ಜಲಶಕ್ತಿ ರಾಜ್ಯ ಸಚಿವ ಬಿಶ್ವೇಶ್ವರ ತುಡು ಉತ್ತರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT