ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಇಂದು ₹975 ಕೋಟಿಯನ್ನು ರಾಜ್ಯದ 48,75,000 ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 2022-23ನೇ ಸಾಲಿನ 2 ನೇ ಕಂತಿನ ಆರ್ಥಿಕ ನೆರವಾದ ₹975 ಕೋಟಿಯನ್ನು ರಾಜ್ಯದ 48,75,000 ರೈತರ ಖಾತೆಗಳಿಗೆ ನೇರವಾಗಿ ಜಮಾಕ್ಕೆ ಇಂದು ಚಾಲನೆ ನೀಡಲಿದ್ದೇನೆ ಎಂದಿದ್ದಾರೆ.
ಪಿಎಂ ಕಿಸಾನ್–ಕರ್ನಾಟಕ ವಿಭಾಗದಿಂದ ಈ ನಿಧಿ ಜಮಾ ಆಗುತ್ತಿದೆ. ಭಾರತದಲ್ಲಿರುವ ಭೂಹಿಡುವಳಿ ಹೊಂದಿರುವ ರೈತರಿಗೆ ಆದಾಯ ಬೆಂಬಲ ಒದಗಿಸುವ ಯೋಜನೆ ಇದಾಗಿದೆ. ಕೇಂದ್ರದಿಂದ ₹6000 ಹಾಗೂ ರಾಜ್ಯದಿಂದ ₹4000 ಸೇರಿ ಒಟ್ಟು ₹10000 ರೈತರಿಗೆ ನೆರವು ನೀಡಲಾಗುತ್ತಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಯೋಜನೆ ಅಡಿಯಲ್ಲಿ 2019 ರಿಂದ ಈವರೆಗೆ 50.3 ಲಕ್ಷ ಫಲಾನುಭವಿಗಳಿಗೆ ₹4,821 ಕೋಟಿ ಆರ್ಥಿಕ ಸಹಾಯಧನ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.